32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

ಬೆಳ್ತಂಗಡಿ: ಇಲ್ಲಿಯ ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ ವಸತಿನಿಲಯದ ಬಳಿಯಿರುವ ಅಡಿಕೆ ತೋಟ ದಲ್ಲಿ
ಬಳಿಯಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಚಿರತೆ ಪತ್ತೆಯಾದ ಬಗ್ಗೆ ವರದಿಯಾಗಿದೆ.

ಬೆಳಿಗ್ಗೆ ವಸತಿ ನಿಲಯದ ಮಕ್ಕಳು ಬಟ್ಟೆ ಒಗೆಯಲು ಹೊರಗೆ ಬಂದಾಗ ನಿಲಯಕ್ಕೆ ತಾಗಿಕೊಂಡು ಪಕ್ಕದಲ್ಲಿರುವ ಅಡಿಕೆ ತೋಟದ ಬದಿಯಲ್ಲೇ ಇದ್ದ ಚಿರತೆಯೊಂದನ್ನು ನೋಡಿದ ಶಾಲಾ ಮಕ್ಕಳು ಹೆದರಿ ನಿಲಯದ ಒಳಗೆ ಓಡಿ ಹೋಗಿ ನಿಲಯ ಸಿಬ್ಬಂದಿಗೆ ಮತ್ತು ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದಾರೆ.

ಅಲ್ಲದೇ ಅದೇ ಪರಿಸರದ ಪಕ್ಕದ ಕೆಲ್ಲಗುತ್ತು ಜಂಕ್ಷನ್ ಬಳಿಯಲ್ಲಿ ಮಹಿಳೆಯೊಬ್ಬರು ಬೆಳಿಗ್ಗೆ 7-15 ರ ಸಮಯದಲ್ಲಿ ಫ್ಯಾಕ್ಟರಿ ಕೆಲಸಕ್ಕೆಂದು ಹೋಗುತ್ತಿರುವ ಸಮಯದಲ್ಲಿ ಚಿರತೆಯೊಂದು ರಸ್ತೆ ಬದಿಯಲ್ಲಿ ಜೋರಾಗಿ ಘರ್ಜನೆ ಮಾಡಿದೆ. ಚಿರತೆ ಬರುತ್ತಿರುವ ಸೂಚನೆ ಅರಿತ ಮಹಿಳೆ ಭಯಭೀತರಾಗಿ ಬೆಳ್ತಂಗಡಿ ಪೇಟೆ ಕಡೆಗೆ ಓಡಿಕೊಂಡು ಹೋಗಿ ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳು ಸ್ಥಳೀಯರು ಮಾಹಿತಿಯನ್ನು ಪಡಕೊಂಡ ಬಿ.ಕೆ.ವಸಂತ್ ರವರು ಸ್ಥಳೀಯರಿಗೆ ಶಾಲಾ ಮಕ್ಕಳಿಗೆ ಈ ಮಾಹಿತಿಯನ್ನು ತಿಳಿಸಿ ಎಚ್ಚರಿಕೆ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿ ಆರ್ ಎಫ್ ಒ ತ್ಯಾಗರಾಜ್
ರವರಿಗೆ ಮಾಹಿತಿಯನ್ನು ನೀಡಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳಾದ ಕಿರಣ್ ಪಾಟೀಲ್ ,ಪರಶಿವ ಮೂರ್ತಿ, ಬಿ.ಕೆ ವಸಂತ್, ಸ್ಥಳೀಯ ಮುಖಂಡರಾದ ಸನತ್ ಕುಮಾರ್ ಜೈನ್, ಜಯಕುಮಾರ್,ಹರೀಶ್ ಜೈನ್ , ಹರೀಶ್ ಆಟೋ ಕೆಲ್ಲಗುತ್ತು,
ಮತ್ತಿತರರು ಮುಗುಳಿ ಕೆಲ್ಲಗುತ್ತು , ಪ್ರದೇಶದಲ್ಲಿ ಚಿರತೆ ಬಂದಿರುವ ಬಗ್ಗೆ ಅದರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಪರಿಶೀಲನೆ ಮಾಡಿದ್ದಾರೆ.

ಈ ದಿನ ಸಂಜೆ ಚಿರತೆ ಬರುವ ನಿಗದಿತ ಸ್ಥಳವೊಂದನ್ನು ಗುರುತಿಸಿ ಆ ಪ್ರದೇಶದಲ್ಲಿ ಚಿರತೆ ಹಿಡಿಯಲು ಬೋನು (ಗೂಡು)ನ ವ್ಯವಸ್ಥೆ ಮಾಡಲಾಗಿದೆ. ಮತ್ತು ರಾತ್ರಿ ಮತ್ತು ಬೆಳ್ಳಂಬೆಳಗೆ ಸಂಚರಿಸುವ ಸ್ಥಳೀಯ ಜನರಿಗೆ ಹೊರಗಡೆ ತಿರುಗಾಡದಂತೆ ಮಾಹಿತಿಯನ್ನು ನೀಡಿದ್ದಾರೆ.

Related posts

ವಿ‌ ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್” ಪ್ರದಾನ

Suddi Udaya

ಯಂಗ್ ಚಾಲೆಂಜರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ- ಶೈಕ್ಷಣಿಕ ನಿಧಿ ಹಸ್ತಾಂತರ

Suddi Udaya

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

Suddi Udaya

ಗೇರುಕಟ್ಟೆ: ಕೊರಂಜ ಸ.ಉ.ಪ್ರಾ. ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಗ್ರಾಮ ಸಮಿತಿ ಶಿಶಿಲ ಇದರ ವಾರ್ಷಿಕ ಕಾರ್ಯಕ್ರಮ

Suddi Udaya

ಪಡಂಗಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!