September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಪ್ರಾಂತೀಯ ಸಮ್ಮೇಳನ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಸೇವೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಗದೀಶ್ ಚಂದ್ರ ಡಿ.ಕೆ. ಅವರು ಹೇಳಿದರು.

ಅವರು ಬೆಳುವಾಯಿ ಖಂಡಿಗ ಗ್ರೀನ್ಸ್ ಆವರಣದಲ್ಲಿ ನಡೆದ ಲಯನ್ಸ್‌ ಕ್ಲಬ್ ಜಿಲ್ಲೆ 317ಡಿ ರೀಜಿಯನ್ 10ರ ಲಯನ್ಸ್ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮೇಳನವನ್ನು ಲಯನ್ಸ್ ಪ್ರಾಂತ್ಯ ಪ್ರಥಮ ಮಹಿಳೆ ಸುಮತಿ ಜೆ. ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಹೆಚ್.ಆರ್. ಕೇಶವ ಮಾತನಾಡಿ, “ಮಾನವೀಯತೆ ಮತ್ತು ಸೇವೆ ಒಗ್ಗೂಡಿದಾಗ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ. ಸೇವೆಗೆ ಶಿಕ್ಷಣವೇ ಕಡ್ಡಾಯ ಮಾನದಂಡವಲ್ಲ” ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಮಂಗಳೂರು ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ , ಲಯನ್ಸ್‌ ವಲಯ ಅಧ್ಯಕ್ಷ ಕುಡ್ಲಿ ಅರವಿಂದ ಶೆಣೈ ಅಭಿನಂದನಾ ಮಾತುಗಳೊಂದಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್‌ ವಲಯ ಅಧ್ಯಕ್ಷರಾದ ಮೆಲ್ವಿನ್ ಸಲ್ವಾನ, ಜೊಸ್ಸಿ ಮಿನೇಜಸ್, ಪ್ರಾಂತೀಯ ಸಮ್ಮೇಳನ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಕಾರ್ಯದರ್ಶಿ ಹೆರಾಲ್ಡ್ ತಾವೋ, ಉಪಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಖಜಾಂಚಿ ಹರೀಶ್ ಪೂಜಾರಿ, ಸಂಚಾಲಕ ಓಸ್ವಾಲ್ಡ್ ಲಯನ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆ ಪ್ರತಿಭಾ ಹೆಬ್ಬಾರ್, ಸುಧೀರ್ ಭಂಡಾರಿ, ಮುರಳಿ ಬಲಿಪ, ಜಾನೆಟ್ ಡಿ., ಅರುಣ್ ಕಾರ್ಡೋಜ ಹಾಗೂ ಲಿಯೋ ಕ್ಲಬ್‌ ಅಧ್ಯಕ್ಷರುಗಳು, ವೇಣೂರು ಲಯನ್ಸ್ ಕಾರ್ಯದರ್ಶಿ ಜಯರಾಮ್ ಹೆಗ್ಡೆ ಮತ್ತು ಕೋಶಾಧಿಕಾರಿ ಸತೀಶ್ ಚಿಗುರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷಿಕ ವಿ.ಎಸ್. ಜಯರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಲಯನ್ಸ್ ಸೇವಾ ಕಾರ್ಯಗಳನ್ನು ಪ್ರದರ್ಶಿಸಲಾಯಿತು. ಮಂಗಳೂರಿನ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಆಶ್ರಯದಲ್ಲಿ ಜಿಲ್ಲಾ ಇಂಟರ್ – ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya

ಅರಣ್ಯ ಒತ್ತುವರಿ ಮತ್ತು ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ತೆರವುಗೊಳಿಸುವಂತಿಲ್ಲ: ಪ್ರತಾಪ್ ಸಿಂಹ ನಾಯಕ್

Suddi Udaya

ಪ್ರಮೋದ್ ಕುಮಾರ್ ರವರಿಗೆ ‘ಪಣಿಕ್ಕರ್’ ಬಿರುದು

Suddi Udaya

‘ಕಬ್ಜಾ’ ಶರಣ್ ತಂಡದಿಂದ ಸೌಜನ್ಯ’ ನ್ಯಾಯಕ್ಕಾಗಿ ಪಾದಯಾತ್ರೆ: ಧರ್ಮಸ್ಥಳ ಪ್ರವೇಶ ದ್ವಾರದಲ್ಲಿ ‘ಕಬ್ಜಾ’ ಶರಣ್ ತಂಡಕ್ಕೆ ಗ್ರಾಮಸ್ಥರ ತಡೆ: ಮಾತಿನ ಚಕಮಕಿ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

AISECT ಯುನಿವರ್ಸಿಟಿ ಕರ್ನಾಟಕ ರಾಜ್ಯ ಸಮ್ಮೇಳನ 2025: ದ.ಕ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜಿನಿಂದ ಶೈಕ್ಷಣಿಕ ಶಕ್ತಿ

Suddi Udaya
error: Content is protected !!