September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಿತೇಶ್‌ನ ಮನೆಗೆ ಭೇಟಿ ನೀಡಿದ ಕಿರಣ್‌ಚಂದ್ರ ಪುಷ್ಪಗಿರಿ

ಬೆಳ್ತಂಗಡಿ: ಫೆ. 10 ರಂದು ರಾತ್ರಿ ವೇಳೆ, ಜಿತೇಶ್ ಎಂಬ ಯುವಕನು ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಆ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಾಸಕರಾದ ಹರೀಶ್ ಪೂಂಜಾ ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ, ಗಾಯಗೊಂಡ ಜಿತೇಶ್‌ನ ಸ್ಥಿತಿಯನ್ನು ಪರಿಶೀಲಿಸಿ, ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಮಾನವೀಯತೆ ಹಾಗೂ ತುರ್ತು ಸ್ಪಂದನೆಯನ್ನು ತೋರಿಸಿದ್ದಾರೆ.

ಕೆಲವರು ಈ ಘಟನೆಯನ್ನು “ಪಬ್ಲಿಸಿಟಿ ಗಿಮಿಕ್” ಎಂದು ತಪ್ಪಾಗಿ ಚಿತ್ರಿಸುವುದು ನಿಜಕ್ಕೂ ನೋವಿನ ಸಂಗತಿ. ಸಂಕಷ್ಟದ ಸಮಯದಲ್ಲಿ ತೋರಿದ ಮಾನವೀಯತೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಸಮಾಜ ಸೇವಕ ಕಿರಣ್ ಚಂದ್ರ ಪುಷ್ಪಗಿರಿ ಅವರು ಜಿತೇಶ್‌ನ ಮನೆಗೆ ಸ್ವತಃ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಜಿತೇಶ್‌ನ ಆರೋಗ್ಯ ವಿಚಾರಿಸಿ, ಅವನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸಿದ್ದಾರೆ. ಇದು ಮಾನವೀಯತೆ, ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕ. ನಮ್ಮ ಪ್ರದೇಶಕ್ಕೆ ಇಂತಹ ಜನನಾಯಕರು ದೊರೆತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

ಇವರ ಸೇವಾಭಾವ ಇನ್ನೂ ಅನೇಕ ಜೀವಗಳಿಗೆ ಬೆಳಕಾಗಲಿ ಎಂದು ಹಾರೈಸೋಣ. ಜಿತೇಶ್ ನ ಸಂಕಷ್ಟದ ಸಮಯದಲ್ಲಿ ಸಹಾಯಸ್ತ ಕೊಟ್ಟವರು ಈ ಇಬ್ಬರು ನಾಯಕರು, ಸಾಧ್ಯವಾದರೆ ಜನರ ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸೋಣ ? ವಿನಾಕಾರಣ ಆರೋಪ ಮಾಡಿ ವಿಷದ ಬೀಜ ಬಿತ್ತುವ ಪ್ರಯತ್ನಗಳನ್ನು ದೂರವಿರಿಸೋಣ.
-ಕರುಣಾಕರ ಉಜಿರೆ ಟೀಮ್ ಪುಷ್ಪಗಿರಿ

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ವಕ್ರ ಪಾದಕ್ಕೆ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ಪ್ರತೀಕ್ಷ್. ಬಿ ರವರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ಚಾರ್ಮಾಡಿಯಲ್ಲಿ ಮತದಾನ ವಿಳಂಬ : ಡಿ ಮಸ್ಟರಿಂಗ್ ಕೇಂದ್ರ ಕ್ಕೆ ಹೊರಟ ವಾಹನ ತಡೆಗಟ್ಟಿದ ಜನರ‌ ಮೇಲೆ ಪೊಲೀಸರ ಲಾಠಿಚಾರ್ಜ್ : ಹಲವಾರು ಮಂದಿಗೆ ಗಾಯ

Suddi Udaya

ಧರ್ಮಸ್ಥಳ ಕ್ಷೇತ್ರದಿಂದ ಅಯೋಧ್ಯೆಗೆ ಬೆಳ್ಳಿಯ ಪೂಜಾ ಪರಿಕರ ಸಮರ್ಪಣೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಬಳಂಜ ಬೊಂಟ್ರೋಟ್ಟು ಗುತ್ತು ಮನೆತನದ ಶಾಂಭವಿ ಅನಾರೋಗ್ಯದಿಂದ ನಿಧನ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!