32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಮಡಂತ್ಯಾರು ವತಿಯಿಂದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

ಮಡಂತ್ಯಾರು: ಜೆಸಿಐ ಮಡಂತ್ಯಾರು ಇದರ ನೇತೃತ್ವದಲ್ಲಿ “ವೃತ್ತಿ ಮಾರ್ಗದರ್ಶನ” ದ ಕುರಿತಾದ‌ ಎರಡನೇಯ ತರಬೇತಿ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಮಚ್ಚಿನದ ಸಹಯೋಗದಲ್ಲಿ ನಡೆಯಿತು.

ಸರಕಾರಿ ಪ್ರೌಢಶಾಲೆ ಮಚ್ಚಿನದ ಪ್ರಭಾರ ಮುಖ್ಯ ಶಿಕ್ಷಕ ಸುರೇಶ್ ಎಂ. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆಸಿಐ ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷ, ಹೆಸರಾಂತ ತರಬೇತುದಾರರಾದ ಜೆಸಿ ಪ್ರೀತಿ ಶೆಟ್ಟಿಗಾರ್ ಅವರ ಪರಿಚಯವನ್ನು ಮಾಡಿದರು.

ನಂತರದಲ್ಲಿ ತರಬೇತುದಾರರಾದ ಜೇಸಿ ಪ್ರೀತಿ ಶೆಟ್ಟಿಗಾರ್ ಅವರು ಅತ್ಯದ್ಭುತವಾಗಿ, ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆದು, ಅವರಿಗೆ ಮನಮುಟ್ಟುವಂತೆ, ಅತ್ಯಾಪ್ತವಾಗಿ ಮಾತನ್ನಾಡುತ್ತಾ, ನಡುನಡುವೆ ನಗೆ ಚಟಾಕಿಗಳನ್ನು ಹಾರಿಸುತ್ತಾ, ವೃತ್ತಿ ಮಾರ್ಗದರ್ಶನದ ಬಗ್ಗೆ ತರಬೇತಿಯನ್ನು ನೀಡಿದರು. ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡರು.

ಅಧ್ಯಕ್ಷರು ಸಭೆಯ ಉತ್ತರಾರ್ಧ ಭಾಗವನ್ನು ಸುಸ್ಥಿತಿಗೆ ತಂದ ಬಳಿಕ ವಿದ್ಯಾರ್ಥಿಗಳು ತರಬೇತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಸುರೇಶ್ ಎಂ. ಅವರು ತರಬೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ದೈಹಿಕ ಶಿಕ್ಷಕ ಸುಭಾಷ್ ಅರುವ ಕಾರ್ಯಕ್ರಮದ ಬಗ್ಗೆ ಸಂತಸದ ಮಾತುಗಳನ್ನಾಡಿದರು. ಜೆಸಿಐ ಮಡಂತ್ಯಾರಿನ ನಿಕಟಪೂರ್ವ ಅಧ್ಯಕ್ಷ ಜೇಸಿ ಅಮಿತಾ ಅಶೋಕ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಜೇಸಿ ಸಾಯಿಸುಮಾ ಎಂ ನಾವಡ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಮಚ್ಚಿನದ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತರಬೇತಿ ಕಾರ್ಯಕ್ರಮದ ಸಂಯೋಜಕಿ ಜೇಸಿ ಅಶ್ವಿನಿ ಕುಮಾರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆಸಿಐ ಮಡಂತ್ಯಾರು “ಆಯನ – 2026” ಇದರ ಅಧ್ಯಕ್ಷ ಜೇಸಿ ಜೆಎಫ್ ಎಮ್ ಸಾಯಿಸುಮಾ ಎಂ ನಾವಡ ಇವರು ಸಭೆಯನ್ನು ಸುಸ್ಥಿತಿಗೆ ತಂದರು. ಶಾಲಾ ವಿದ್ಯಾರ್ಥಿಗಳು ಶುಭ ಆರಂಭದ ಸಂಕೇತವಾಗಿ ಪ್ರಾರ್ಥನೆಯನ್ನು ಹಾಡಿದರು. ಜೆಸಿಐ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ಯತೀಶ್ ರೈ ಜೇಸಿ ವಾಣಿಯನ್ನು ವಾಚಿಸಿದರು. ಜೆಸಿಐ ಮಡಂತ್ಯಾರಿನ ಅಧ್ಯಕ್ಷ ಜೇಸಿ ಸಾಯಿಸುಮಾ ಎಂ ನಾವಡ ಇವರು ಅತಿಥಿಗಳನ್ನು ಸ್ವಾಗತಿಸಿದರು. ಜೆಸಿಐ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ಯತೀಶ್ ರೈ ಧನ್ಯವಾದವಿತ್ತರು.

Related posts

ಬೆಳ್ತಂಗಡಿ : ಬಿಜೆಪಿ ಮಂಡಲದ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ಕನ್ನಡ ಭುವನೇಶ್ವರಿ ರಥ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya

ಕಲ್ಲೇರಿಯಲ್ಲಿ ವಕೀಲರ ಕಚೇರಿ ಶುಭಾರಂಭ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya
error: Content is protected !!