23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ವರ್ಷಾವಧಿ ನೇಮ ಮತ್ತು ದೊಂಪದ ಬಲಿ ಉತ್ಸವ

ನಿಡ್ಲೆ: ಬರೆಂಗಾಯ ಪೊರ್ಕಳ ಕಸಬಾ ಭಟಾರಿ ಭೂತ ಆಡಳಿತ ಟ್ರಸ್ಟ್ ನ ವನದುರ್ಗಾರಾಧನೆ, ವರ್ಷಾವಧಿ ನೇಮ ಮತ್ತು ದೊಂಪದ ಬಲಿ ಉತ್ಸವವು ಫೆ.12 ರಿಂದ 13ರವರೆಗೆ ನಡೆಯಲಿದೆ.

ಇಂದು(ಫೆ.12) ವಣಸಾಯದಲ್ಲಿ ವನದುರ್ಗಾರಾಧನೆ , ಬ್ರಾಹ್ಮಣ ಸಂತರ್ಪಣೆ ಮತ್ತು ವನ ಭೋಜನವು ನಡೆಯಿತು.

ಈ ಸಂದರ್ಭದಲ್ಲಿ ನಿಡ್ಲೆ ಬರೆಂಗಾಯ ವಿಶ್ವಸ್ಥ ಮಂಡಳಿ ಅಧ್ಯಕ್ಷರು, ಸದಸ್ಯರು, ನೇಮೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು, ನಾಲ್ವಿಕೆಯರು, ಹಾಗೂ ಊರವರು ಉಪಸ್ಥಿತರಿದ್ದರು.

ರಾತ್ರಿ ಪಾಂಡೀಲು ಮನೆಯಿಂದ ಭಂಡಾರ ಹಿಡಿದು ಕೊಡಂಗೆ ಸ್ಥಾನದಲ್ಲಿ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಫೆ. 13 ರಂದು ರಾತ್ರಿ ಕಲ್ಕುಡ ಗುಡ್ಡೆಯಲ್ಲಿ ಕಲ್ಕುಡ ವ್ಯಾಘ್ರ ಚಾಮುಂಡಿ ಹಾಗೂ ಸಹ ದೈವಗಳಿಗೆ ದೊಂಪದ ಬಲಿ ಉತ್ಸವ ಜರಗಲಿರುವುದು.

Related posts

ನೆರಿಯ: ರಸ್ತೆ ಬದಿಯ ಹುಲ್ಲುಗಾವಲಿಗೆ ಕಿಡಿಗೇಡಿಗಳಿಂದ ಬೆಂಕಿ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 11 ಜೋಡಿಗಳಿಗೆ ಸಾಮೂಹಿಕ ವಿವಾಹ ನಿಶ್ವಿತಾರ್ಥ,

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯ ವತಿಯಿಂದ “ಆಟಿಡೊಂಜಿ ಕೂಟ” ಕಾರ್ಯಕ್ರಮ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಎಸ್‌ವೈಎಸ್ ಉಜಿರೆ ಸರ್ಕಲ್ ವತಿಯಿಂದ ಎಂಡೋ ಪೀಡಿತರಿಗೆ ಆಹಾರದ ಕಿಟ್ ವಿತರಣೆ

Suddi Udaya
error: Content is protected !!