25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2026

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸೃಜನಶೀಲತೆ ಪ್ರತಿಭೆ ಹಾಗೂ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಲು ಫೆ.13 ರಂದು ಕಲಾ ಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ವಂ| ಫಾ ವಿಜಯ್ ಲೋಬೋ ಉದ್ಘಾಟಿಸಿ ಮಾತಾನಾಡಿ ಕಲೆಯು ಮಕ್ಕಳಲ್ಲಿ ಅಭಿರುಚಿಯನ್ನು ಬೆಳೆಸುತ್ತದೆ ಅದನ್ನು ಪೋಷಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ. ಮಕ್ಕಳ ಕಲಾ ಪ್ರತಿಭೆಗೆ ವೇದಿಕೆಯನ್ನು ಸಲ್ಲಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಷ್ಠಾ ಎಮ್.ಡಿ, ಸ್ಫರ್ಶ ಡಿ.ಎಸ್, ಸೋನಿಕ ಎಸ್.ಜಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಥಿಗಳು ರಚಿಸಿದ ಚಿತ್ರಕಲೆ ಹಾಗೂ ಕರಕುಶಲ ಪ್ರದರ್ಶನವನ್ನು ಅನುಗ್ರಹ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಚಿತ್ರಕಲೆ ಹಾಗೂ ಕರಕುಶಲತೆಯನ್ನು ವೀಕ್ಷಿಸಿದರು. ಕಲಾ ಶಿಕ್ಷಕಿಯರಾದ ಸುಮನ ಹಾಗೂ ಗ್ಲೋರಿಯಾ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿನಿ ತಪಸ್ಯ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿನಿ ಸ್ಪರ್ಶ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ವಲಯ ಮಟ್ಟದ ಕ್ರೀಡಾಕೂಟ: ನಯನಾಡು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಡಿ.5: ವಿದ್ಯುತ್ ನಿಲುಗಡೆ

Suddi Udaya

ಮುಂಡಾಜೆ: ಗುಡ್ಡಕ್ಕೆ ಬೆಂಕಿ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸಂಯೋಜಿತ ಸಂಘವಾಗಿ ಕನ್ಯಾಡಿ ರಿಕ್ಷಾ ಪಾರ್ಕ್ ಸೇರ್ಪಡೆ

Suddi Udaya

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಎ.9: ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಯಾತ್ರೆ

Suddi Udaya
error: Content is protected !!