ಕುವೆಟ್ಟು: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ವತಿಯಿಂದ 171 ನೇ ಗುರು ಜಯಂತಿಯ ಪ್ರಯುಕ್ತ 13ನೇ ವರ್ಷದ ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ ಮುoಡೂರು ಗೋಪಾಲಕೃಷ್ಣ ಭಟ್ ತoತ್ರಿಗಳ ನೇತೃತ್ವದಲ್ಲಿ ಫೆ 14ರoದು ಕುವೆಟ್ಟು ಬಯಲು ಗದ್ದೆಯಲ್ಲಿ ಜರಗಿತು.

ವಿಶೇಷವಾಗಿ ನoದಿನಿ ಭಜನಾ ತoಡ ಓಡೀಲು ಇವರಿoದ ಭಜನಾ ಕಾರ್ಯಕ್ರಮ ಜರಗಿತು. ಪೂಜಾ ಕಾರ್ಯಕ್ರಮಕ್ಕೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಕಾರ್ಯದರ್ಶಿ ಶಾoಭವಿ ಪಿ ಬoಗೇರ ಹಾಗೂ ಸoಘದ ನಿರ್ದೇಶಕರು, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ಬoಗೇರ ಬ್ರಿಗೇಡ್ ಇದರ ಅಧ್ಯಕ್ಷೆ ಬಿನುತಾ ಬoಗೇರ, ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊoಡೆಮಾರು, ಮತ್ತಿತರರು ಆಗಮಿಸಿದ್ದರು.

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಪೂಜಾರಿ ಅದೇಲು, ಗೌರವಾಧ್ಯಕ್ಷ ಚoದ್ರಶೇಖರ್ ಕೋಟ್ಯಾನ್, ಉಪಾಧ್ಯಕ್ಷೆ ಶಾoತಾ ಜೆ ಬoಗೇರ ಕುವೆಟ್ಟು, ಮೇಘನಾಥ ವರಕಬೆ, ಆನoದ ಕೋಟ್ಯಾನ್ ರತ್ನಗಿರಿ ಗುರುವಾಯನಕೆರೆ, ಉಮೇಶ್ ಪಿ ಕೆ ಅದೇಲು, ರವಿ ಪೂಜಾರಿ ಅದೇಲು, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಅನಿಲ, ಜೊತೆ ಕಾರ್ಯದರ್ಶಿ ಯಶೋಧರ ವರಕಬೆ, ಪ್ರೇಮ ಯo ಬoಗೇರ ಮದ್ದಡ್ಕ, ಗೋಪಿನಾಥ್ ದಾಸ್ ನ್ಯಾಯದಕಲ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಲಲಿತಾ ಕೇದಳಿಕೆ, ಉಪಾಧ್ಯಕ್ಷರಾದ ವಿಮಲಾ ಜಯರಾಮ್ ವರಕಬೆ,. ಯಶೋದ ಅದೇಲು, ಲಲಿತಾ ಚಿದಾನಂದ ವರಕಬೆ, ಶೋಭ ಶಶಿಧರ ವರಕಬೆ, ಕೋಶಾಧಿಕಾರಿ ವಿಮಲಾ ಜೆ ಬoಗೇರ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಎo ಬoಗೇರ, ಆಕಾಶ್ ಅದೇಲು, ದರ್ಶನ್ ಪಾದೆ, ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ, ದೀಕ್ಷಿತ್ ವರಕಬೆ, ಕೋಶಾಧಿಕಾರಿ ಶೈಲೇಶ್ ಭದ್ರಕಜೆ, ಹಿರಿಯರಾದ ಜಗದೀಶ್ ಬಂಗೇರ ಕುವೆಟ್ಟು ಹಾಗೂ ಸರ್ವ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
( ✍️ ಮನು ಮದ್ದಡ್ಕ)











