September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಇಳಂತಿಲ ಗ್ರಾಮದ ಕಟ್ಟೆಚಾರು ನಿವಾಸಿ ಕುಶಾಲಪ್ಪ ಗೌಡ ನಿಧನ

ಬೆಳ್ತಂಗಡಿ: ಇಳಂತಿಲ ಗ್ರಾಮದ ಕಟ್ಟೆಚಾರು ನಿವಾಸಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯರಾಗಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಕುಶಾಲಪ್ಪ ಗೌಡ (78ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಾ.31ರಂದು ಸ್ವಗೃಹದಲ್ಲಿ ನಿಧನರಾದರು.

ಉಪ್ಪಿನಂಗಡಿಯ ಶ್ರೀ ಗಣೇಶ ಸ್ಟೋರ್ ಜವಳಿ ಮಳಿಗೆಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದ್ದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದ ಇವರು ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸಂಘದೊಂದಿಗೆ ಸಕ್ರೀಯರಾಗಿದ್ದರು. ರಾವಣ, ಇಂದ್ರಜಿತು, ವಾಲಿ, ಸುಗ್ರೀವ, ಮಾಗಧ, ಕೌರವ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರಲ್ಲದೆ ಪ್ರಸಂಗದ ಯಾವುದೇ ಪಾತ್ರಗಳನ್ನು ಸಮಯೋಚಿತವಾಗಿ ಮಾಡಬಲ್ಲ ಸಮರ್ಥರಾಗಿದ್ದರು.

ಮೃತರು ಪತ್ನಿ ವಾರಿಜ, ಮೂವರು ಪುತ್ರರು, ಓರ್ವೆ ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ .

ಇವರ ನಿಧನಕ್ಕೆ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ತೀವು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Related posts

ಅಳದಂಗಡಿ ಸ. ಪ್ರೌ. ಶಾಲೆಯ ಶಿಕ್ಷಕ ಜಗದೀಶ್ ಬಿ.ಎಸ್ ಹಾಗೂ ಗೌರವ ಶಿಕ್ಷಕಿ ಸಾಧನ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಶುಭ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿದಾಗ ನಾಲ್ಕೂರು ಬೊಕ್ಕಸ ಬಳಿ ಬೈಕ್ ಸ್ಕಿಡ್ : ಗಂಭೀರ ಗಾಯಗೊಂಡ ಮಹಿಳೆ ಸಾವು

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ

Suddi Udaya

ಬೆಳ್ತಂಗಡಿ: 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಮಾ.3: ಬೆಳ್ತಂಗಡಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

Suddi Udaya

ಯಂತ್ರ 2.0″ ಸ್ಪರ್ಧೆ: ಉಜಿರೆ ಎಸ್.ಡಿ.ಎಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!