ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನಾದ್ಯಂತ ನಡೆಯುತ್ತಿರುವ ನಕಲಿ ಚಿನ್ನದ ವಂಚನೆ ಜಾಲವನ್ನು ತಡೆಗಟ್ಟಲು ಹಾಗೂ ಮೌಲ್ಯಮಾಪಕರ ಹಿತರಕ್ಷಣೆಗಾಗಿ ಫೆ.14 ರಂದು ಗುರುವಾಯನಕೆರೆಯ ನವಶಕ್ತಿ ರೆಸಿಡೆನ್ಸಿಯಲ್ಲಿ ತುರ್ತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ತಾಲೂಕಿನ ಎಲ್ಲಾ ಹಿರಿಯ ಚಿನ್ನಾಭರಣ ಮೌಲ್ಯಮಾಪಕರುಗಳು ಉಪಸ್ಥಿತರಿದ್ದು, ವಂಚನೆ ಜಾಲವನ್ನು ಗುರುತಿಸುವ ಮತ್ತು ವೃತ್ತಿಪರ ಜಾಗೃತಿ ಮೂಡಿಸುವ ಕುರಿತು ಎಲ್ಲರಿಗೂ ಅತ್ಯಮೂಲ್ಯ ಮಾರ್ಗದರ್ಶನ ನೀಡಿದರು.
ವಂಚಕರ ಪತ್ತೆ, ಕಮಿಷನ್ ದರ ಹೆಚ್ಚಳ ಹಾಗೂ ಪ್ರಾಮಾಣಿಕ ಚಿನ್ನದ ಆಭರಣ ಮೌಲ್ಯಮಾಪಕರಿಗೆ ವೃತ್ತಿಪರ ರಕ್ಷಣೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಆಯಾಯ ಬ್ಯಾಂಕ್‌ಗಳ ಅಧ್ಯಕ್ಷರುಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಚಿನ್ನಾಭರಣ ಮೌಲ್ಯಮಾಪಕರು ಉಪಸ್ಥಿತರಿದ್ದರು.











