22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಮೋಘ ಸಾಧನೆ

ಬೆಳ್ತಂಗಡಿ: ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್ ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್ ಒನ್ ಫಲಿತಾಂಶದಲ್ಲೂ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.

ರಾಜ್ಯ ಮಟ್ಟದಲ್ಲಿ ಶಿಕ್ಷಣ ಪ್ರೇಮಿಗಳು ಕಣ್ಣರಳಿಸಿ ನೋಡುವಂಥ ಫಲಿತಾಂಶ ಎಕ್ಸೆಲ್ ನದ್ದಾಗಿದೆ. ಮೌರ್ಯ ವೈ ಡಿ – 99.6691 ಪರ್ಸೆಂಟೈಲ್ ಪಡೆದು ಜಿಲ್ಲೆಯಲ್ಲಿಯೇ ಅಗ್ರಸ್ಥಾನಿಯಾಗಿದ್ದಾರೆ.
ಸ್ವಸ್ತಿಕ್ ಎಂ ಜೈನ್ – 99.4965, ಅಕ್ಷಯ್ ಎ – 99.3081, ಅಭಿನವ ಕೆ ಮಯ್ಯ – 98.6487, ತೇಜಲ್ ವಿ ವಾಂಟಕರ್ – 98.5584, ಸಮ್ಯಕ್ ವಿನಯ್ – 98.5468, ಶಮಿತ್ ಗೌಡ ಎ ಎಸ್ 98.4138, ಕೆ ಕೆ ಸಾರ್ವಿಕಾ – 98.3106, ಶಶಾಂಕ್ ಗೌಡ ಆರ್ – 98.1685,
ಯಶಸ್ ಗೌಡ ಎನ್ – 98.1685 ,ಯಶಸ್ ಜಿ ಎಸ್ – 98.1172 ಪರ್ಸಂಟೈಲ್ ಪಡೆದುಕೊಂಡಿದ್ದಾರೆ.

97 ಶೇಕಡಾಕ್ಕಿಂತ ಅಧಿಕ 24 ವಿದ್ಯಾರ್ಥಿಗಳು, 95 ಶೇಕಡಾಕ್ಕಿಂತ ಅಧಿಕ 37 ವಿದ್ಯಾರ್ಥಿಗಳು ಹಾಗೂ 90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ 83 ವಿದ್ಯಾರ್ಥಿಗಳಾಗಿದ್ದಾರೆ.

ರಾಷ್ಟ್ರಮಟ್ಟದಲ್ಲಿ ರಾಜಸ್ಥಾನದ ಕೋಟಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ. ಅದೇ ಮಾದರಿಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ತರಗತಿ, ಕೋಚಿಂಗ್ ,ಸ್ಟಡಿ ಅವರ್, ಟೆಸ್ಟ್,ಆನ್ ಲೈನ್ ಟೆಸ್ಟಗಳನ್ನು ನಡೆಸಿದ ಕಾರಣ ಅತ್ಯುತ್ತಮ ಫಲಿತಾಂಶ ಬಂದಿದೆ.

ಹತ್ತನೆಯ ತರಗತಿಯಲ್ಲಿ ಸಾಮಾನ್ಯ ಅಂಕ ಪಡೆದುಕೊಂಡ ಕೆಲವು ವಿದ್ಯಾರ್ಥಿಗಳು ಕೂಡಾ ಎಕ್ಸೆಲ್ ನಲ್ಲಿ ಓದಿ, ಜೆಇಇಯಲ್ಲಿ ಅತ್ಯುತ್ತಮ ಅಂಕ ಪಡೆದುಕೊಂಡಿರುವುದು ವಿಶೇಷ. ಸಾಧಿಸುವ ಛಲ, ನಿರಂತರ ಅಭ್ಯಾಸ, ಪರಿಣಿತ ಉಪನ್ಯಾಸಕರ ಮಾರ್ಗದರ್ಶನ, ನಿಯಮಿತವಾಗಿ ಬರೆಯುವ ಅಣಕು ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯಿಗಳನ್ನಾಗಿಸುತ್ತದೆ ಎನ್ನುವ ಬಲ್ಲವರ ಅಭಿಮತಕ್ಕೆ ಎಕ್ಸೆಲ್ ವಿದ್ಯಾರ್ಥಿಗಳು ತಾಜಾ ಉದಾಹರಣೆಯಾಗಿದ್ದಾರೆ.

99 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷದಂತೆ ಹಾಗೂ 90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ವಿತರಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಸಾಮಾನ್ಯ ವ್ಯಕ್ತಿ ಕೂಡಾ ಅಸಾಧಾರಣವಾಗಿ ಬೆಳೆಯುವುದು ಶಿಕ್ಷಣದ ಮೂಲಕ. ವಿದ್ಯೆ ಒಂದಿದ್ದರೆ ಮತ್ತೆಲ್ಲವೂ ಬದುಕಿನಲ್ಲಿ ಲಭಿಸಬಹುದು. ಹಾಗಾಗಿ ವಿದ್ಯೆ ಯಾರೂ ಕದಿಯಲಾಗದ, ಹಂಚಿದಷ್ಟು ಹೆಚ್ಚಾಗುವ, ಯಾವತ್ತಿಗೂ ಕರಗದ ಸಂಪತ್ತು. ಗುಣಮಟ್ಟದ ಶಿಕ್ಷಣವೇ ರಾಷ್ಟ್ರ ನಿರ್ಮಾಣಕ್ಕೆ ಅಡಿಗಲ್ಲು ಎಂದು ಎಕ್ಸೆಲ್ ಭಾವಿಸುತ್ತದೆ.
ಇಂಥ ಅಪೂರ್ವ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರು – ಪ್ರಾಧ್ಯಾಪಕರು, ನಿಲಯಪಾಲಕರು, ಹಾಗೂ ವಿದ್ಯಾರ್ಥಿಗಳ ಹೆತ್ತವರ ಸಹಕಾರವನ್ನು ಈ ಕ್ಷಣದಲ್ಲಿ ಸ್ಮರಿಸಿಕೊಂಡು,ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

-ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು ಆಡಳಿತ ಮಂಡಳಿ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ

Related posts

ಬಳಂಜ ಅಮೃತ ಮಹೋತ್ಸವ ಸಮಿತಿಯಿಂದ ರಕ್ಷಿತ್ ಶಿವರಾಮ್ ರವರನ್ನು ಭೇಟಿ

Suddi Udaya

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿ ರಾಘವ ಹೆಚ್ ಗೇರುಕಟ್ಟೆ ನೇಮಕ

Suddi Udaya

ಧರ್ಮಸ್ಥಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೌಢ ಶಾಲಾ ವಿದ್ಯಾರ್ಥಿನಿ: ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಶಿರ್ಲಾಲಿನಲ್ಲಿ 25ನೇ ವರ್ಷದ ಗುರುಪೂಜಾ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್ ರವರಿಗೆ ರಾಜ್ಯ ಸರಕಾರಿ ನೌಕರರ ಸಹಕಾರಿ ಸಂಘದಿಂದ ಅಭಿನಂದನೆ

Suddi Udaya
error: Content is protected !!