September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಅಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಫೆ16 ಮತ್ತು 17 ರಂದು 2025-26ನೇ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.ಮುಖ್ಯ ಅತಿಥಿಗಳಾಗಿ ಸೇಕ್ರೆಡ್ ಹಾರ್ಟ್ ಕಾನ್ವೆಂಟಿನ ಧರ್ಮ ಭಗಿನಿಯಾದ ಸಿ|ಅನಿತಾ ಫೆರ್ನಾಂಡಿಸ್ ಆಗಮಿಸಿ ಮಾತನಾಡಿ, ಇದು ನಿಮ್ಮ ಪರಿಶ್ರಮ, ಸಮರ್ಪಣೆ ಮತ್ತು ಪ್ರಯತ್ನಗಳ ಫಲವಾಗಿದೆ. ಇಂದು ನೀವು ನಿಮ್ಮ ಪರಿಶ್ರಮದ ಯಶಸ್ಸನ್ನು ಆಚರಿಸುತ್ತಿದ್ದೀರಿ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ |ಸ್ವಾ| ದೀಪಕ್ ಲಿಯೋ ಡೇಸ ರವರು ಮಾತನಾಡಿ ಸ್ಪರ್ಧೆಗಳಲ್ಲಿ ನಾವು ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ನಾವು ಭಾಗವಹಿಸುವುದನ್ನು ನಿಲ್ಲಿಸಬಾರದು ಎಂದು ಹೇಳಿ ಶುಭ ಹಾರೈಸಿದರು. ನರ್ಸರಿ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಜೆರಾಲ್ಡ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯರಾದ ರೀಮಾ ವೆರೋನ ರೋಡ್ರಿಗಸ್ ನಿರೂಪಿಸಿ, ಸಿ| ಟ್ರೀಜಾ ಡಿಸೋಜ ಸ್ವಾಗತಿಸಿ, ಶ್ವೇತಾ ಧನ್ಯವಾದವಿತ್ತರು.

Related posts

ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ನಾವೂರು ಕೈಕಂಬ-ಹತ್ಯಡ್ಕ-ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ರೂ. 300ಲಕ್ಷ ಮಂಜೂರಿಗೆ ಕ್ರಮ ಕೈಗೊಳ್ಳುವಂತೆ ತಾ.ಪಂ ಇ.ಒ ಪತ್ರ: ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ ಸುದ್ದಿ ‘ಉದಯ ಪತ್ರಿಕೆ’

Suddi Udaya

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

Suddi Udaya

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

Suddi Udaya

ಆರಂಬೋಡಿ: ಹೊಕ್ಕಾಡಿಗೋಳಿ ಶಾಲಾ ಶೌಚಾಲಯ ಉದ್ಘಾಟನೆ

Suddi Udaya

ಚಿಬಿದ್ರೆ : ಪೆರಿಯಡ್ಕ ನಿವಾಸಿ ನಾಟಿ ವೈದ್ಯ ರಾಮಣ್ಣ ಗೌಡ ನಿಧನ

Suddi Udaya
error: Content is protected !!