ಉಜಿರೆ: ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ (ನಿವೃತ್ತ) ಕುಮಾರ ಸ್ವಾಮಿ ಮತ್ತು ಸಕುಟುಂಬಿಕರಾಗಿ ಕ್ಯಾಂಪ್ಕೊ ಕಂಪೆನಿಯ ಹಿರಿಯ ಮೇನೇಜರ್ (ಪುತ್ತೂರು) ನಿವೃತ್ತ ಸುಭೇದಾರ್ ರಂಗನಾಥ್ ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ಬ್ರಹ್ಮ ಕಲಶಕ್ಕೆ ತಯಾರಾಗುತ್ತಿರುವ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಾಲಯ, ಸುರ್ಯ ಶ್ರೀ ಸದಾಶಿವರುದ್ರ ದೇವಾಲಯ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿವೃತ್ತ ಸೈನಿಕರು ಮತ್ತು ಅವಲಂಬಿತರಿಗೆ ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಸುಸಜ್ಜಿನ ನುರಿತ ತಜ್ನ ವೈದ್ಯಕೀಯ ಸೇವೆ ನೀಡುತ್ತಿರುವ ಬೆನಕ ಹೆಲ್ತ್ ಸೆಂಟರ್ ಉಜಿರೆ ಗೆ ಬೇಟಿ ನೀಡಿದರು.



ಈ ಸಂದರ್ಭದಲ್ಲಿ ಏಕೆಎಮ್ಎಸ್ಎಸ್ (ರಿ) ದ ಕ ಜಿಲ್ಲೆಯ ಗೌರವಾಧ್ಯಕ್ಷರು ಲಯನ್ ಡಾ, ಗೋಪಾಲಕೃಷ್ಣ ಕಾಂಚೋಡು, ಏಕೆಎಮ್ಎಸ್ಎಸ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಎನ್ ಪಿ ತಂಗಚ್ಚನ್, ಉಪಾಧ್ಯಕ್ಷ ರವಿಪ್ರಸಾದ್, ನಿರ್ದೇಶಕ ಹರೀಶ್ ರೈ , ಮೋಹನ್ ಶೆಟ್ಟಿ ಮುದ್ದಿಗೆ , ಸದಸ್ಯ ಅರುಣ ಶೆಟ್ಟಿ ಮುಂತಾದವರು ಜೊತೆಗಿದ್ದರು.











