32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದು ( ಫೆ. 19): ಬೆಳ್ತಂಗಡಿಯಲ್ಲಿ ಯುವ ನಾಯಕ ಸಂಪತ್ ಬಿ ಸುವರ್ಣರವರ ಮುಂದಾಳತ್ವದಲ್ಲಿ ಸಾಂಸ್ಕೃತಿಕ ವೈಭವ : ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಯ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಸಾಂಸ್ಕೃತಿಕ ಚಿಂತಕ ಸಂಪತ್ ಬಿ.ಸುವರ್ಣ ಅವರ ಸಾರಥ್ಯದ ಪ್ರತಿಷ್ಠಾನವು 16 ವರ್ಷಗಳಿಂದ ನಿರಂತರ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಜನ ಮಾನಸದಲ್ಲಿ ಬೇರೂರಿದೆ.

ಈ ಪ್ರತಿಷ್ಠಾನದಿಂದ ಕುತ್ಯಾರು ಶ್ರೀ ಸೋಮನಾಥ್ವೇಶರ ದೇವಸ್ಥಾನದ ಜಾತ್ರೆ ಪ್ರಯುಕ್ತ 16 ನೇ ವರ್ಷದ ಸಾಂಸ್ಕೃತಿಕ ವೈಭವವು ಫೆ.19 ರಂದು ಬೆಳ್ತಂಗಡಿ ಸಂತೆಕಟ್ಟೆ ಮಾರಿಗುಡಿ ಮೈದಾನದಲ್ಲಿ ನಡೆಯಲಿದೆ.


ಉರ್ವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಾಯಿ ಶಕ್ತಿ ಕಲಾಬಳಗ ಅಭಿನಯಿಸುವ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೊದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಳ್ಳಲಿದೆ. ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘಟಕ ಡಾ.ಪ್ರದೀಪ್ ಆಟಿಕುಕ್ಕೆ ಹಾಗೂ ಸಿನಿಮಾ ಛಾಯಾಗ್ರಹಣಗಾರ ಸಂತೋಷ್ ಆಚಾರ್ಯ ಗುಂಪಲಾಜೆ ಅವರಿಗೆ ಸುವರ್ಣ ರಂಗ ಸಮ್ಮಾನ್-೨೦೨೬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
೨೦೧೧ರಲ್ಲಿ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ಉದ್ಘಾಟನೆಗೊಂಡ ಪ್ರತಿಷ್ಠಾನ ನಿರಂತರ ಕಲಾರಾಧನೆಯಲ್ಲಿ ತೊಡಗಿಸಿಕೊಂಡಿದೆ. ಸಾಂಸ್ಕೃತಿಕ ಚಟುವಟಿಕೆ ವಿರಳವಿರುವ ಬೆಳ್ತಂಗಡಿ ಪರಿಸರದಲ್ಲಿ ಕಲಾಪ್ರೇಮಿಗಳ ಮನ ತಣಿಸುತ್ತಾ ಬರುತ್ತಿದೆ. ವಿಭಿನ್ನ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಹಲವು ಕಲಾವಿದರನ್ನು ಕಿರುತೆರೆಗೆ, ಬೆಳ್ಳಿತೆರೆಗೆ ಪರಿಚಯಿಸಿದ ಶ್ರೇಯಸ್ಸು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಸಲ್ಲುತ್ತದೆ.

ಜನಪದೀಯ ಬೇರುಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯ:
ಭಾರತದ ನೈಜ ಸಾಂಸ್ಕೃತಿಕ ವಿಶ್ವರೂಪ ದರ್ಶನವನ್ನು ಯುವ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ಕಟ್ಟದೆ ಹೋದಲ್ಲಿ ಭಾರತದ ನೈಜ ಸಾಂಸ್ಕೃತಿಕ ವಿಶ್ವರೂಪ ದರ್ಶನ ದೊರೆಯಲು ಸಾಧ್ಯವಿಲ್ಲ. ಆಗಾಗಿ ವ್ಯಕ್ತಿಯೋರ್ವನ ಸಾಂಸ್ಕೃತಿಕ ಮನಸ್ಸುನ್ನು ಕಟ್ಟುವ ಆಂತರಿಕ ಅಭಿವೃದ್ಧಿ ಕಾರ್ಯವನ್ನು ಮಾಡುವುದರೊಂದಿಗೆ ಈ ನೆಲದ ಮಣ್ಣಿನ ಜೀವಂತಿಕೆಯನ್ನು, ಅದರ ಸಾರವನ್ನು, ಈ ದೇಶ ಪ್ರತಿಪಾದಿಸಿದ ಜೀವನ ಮೌಲ್ಯವನ್ನು ತಿಳಿಸುವ ಪ್ರಯತ್ನವೆ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ದೇಶವಾಗಿದೆ. ಕಳೆದ ೧೫ ವರ್ಷಗಳಿಂದ ಇದೇ ವಿಚಾರದಲ್ಲಿ ನಂಬಿಕೆಯಿಟ್ಟು ಬೆಳೆದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯ ನಡೆಸುತ್ತಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದ್ದಾರೆ.

Related posts

ನಾವೂರು ಸರಕಾರಿ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಆಟೋಟ ಸ್ಪರ್ದೆಗಳು, ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ,

Suddi Udaya

ಅಂಡಿಂಜೆ : ನೆಲ್ಲಿಗೇರಿ ನಿವಾಸಿ ರಮೇಶ ಭಂಡಾರಿ ನಿಧನ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

Suddi Udaya

ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ಬೆಳಾಲು ಪ್ರೌಢಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಭವಾನಿ ಮಾರ್ಪಾಲು, ಉಪಾಧ್ಯಕ್ಷರಾಗಿ ರಾಜೇಶ್ ಕುರ್ಕಿಲು

Suddi Udaya
error: Content is protected !!