November 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೆ.8ರಂದು ಸಂಸ್ಕೃತ ವಿಭಾಗದ ವತಿಯಿಂದ ‘ಸಂಸ್ಕೃತೋತ್ಸವ’ ಕಾರ್ಯಕ್ರಮವು ಸೆ.9 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಣೆಗಾರ ವಸಂತ ಮಂಜಿತ್ತಾಯ ಅವರು, “ಸಂಸ್ಕೃತವು ಭಾರತೀಯ ಭಾಷೆಗಳ ಮಾತೃ ಸ್ವರೂಪಿಯಾಗಿದೆ. ಸಂಸ್ಕೃತವು  ನಮ್ಮ ಜೀವನ ಶೈಲಿ, ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯೂ ಹೌದು” ಎಂದರು.

“ನಮ್ಮ ಜೀವನದ ಮೇಲೆ ಸಂಸ್ಕೃತವು ಬೀರುವ ಪ್ರಭಾವದ ಅಗಾಧತೆಯು ನಾನು ದೇವಸ್ಥಾನಕ್ಕೆ ಮಣೆಗಾರನಾಗಿ ಸೇರಿದ ಮೇಲೆ ನನಗೆ ಮನವರಿಕೆಯಾಯಿತು” ಎಂದ ಅವರು, “ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ವಿಭಾಗ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡಿದೆ” ಎಂದು ಶ್ಲಾಘಿಸಿದರು.

“ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸ್ಕೃತಕ್ಕೆ ಇಂದು ಮಹತ್ವ ಪ್ರಾಪ್ತಿಯಾಗಿದೆ. ಭಾರತೀಯ ಬೃಹತ್ ಗ್ರಂಥಗಳ ಮೂಲ ಸಂಸ್ಕೃತ ಭಾಷೆಯಾಗಿದ್ದು, ದೇವರ ಭಾಷೆಯೂ ಆಗಿದೆ”

ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.

ವಿದ್ಯಾರ್ಥಿಗಳು ನೃತ್ಯ, ಗಾಯನ, ಯೋಗ, ನಾಟಕ, ನಾಟ್ಯ ಕಲೆಗಳ ‘ಸಂಸ್ಕೃತಸಂಧ್ಯಾ’ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರ ಪುರೋಹಿತ ಮತ್ತು ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಿಂಚನ ವಂದಿಸಿ, ಮೇಘಾ ನಿರೂಪಿಸಿದರು.

Related posts

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Suddi Udaya

ಪಣಕಜೆ 23ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್.ಐ.ಟಿ ಮುಂದೆ ಹಾಜರಾದ ಯೂಟ್ಯೂಬರ್ ಸಂತೋಷ್ ಕಡಬ ಹಾಗೂ ಜಯಂತ್. ಟಿ ಪತ್ನಿ, ಮಗ, ಮಗಳು

Suddi Udaya

ಬಿಜೆಪಿ ಕೊಕ್ಕಡ 239ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ ಆಯ್ಕೆ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಧರ್ಮಸ್ಥಳದಲ್ಲಿ ನಡೆಯುವ ಸತ್ಯದರ್ಶನ ಕಾರ್ಯಕ್ರಮದ ಬಗ್ಗೆ ಕಣಿಯೂರುನಲ್ಲಿ ಪೂರ್ವಭಾವಿ ಸಭೆ

Suddi Udaya
error: Content is protected !!