September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಫೆ.25-ಮಾ.1: ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜಾತ್ರಾ ಮಹೋತ್ಸವ: ಮಡಿಲು ಸೇವೆ ವಿಶೇಷ- ಮಾತೆ, ಮಕ್ಕಳ ಪುನೀತ ಸಮಾಗಮ- ಬೈದರ್ಕಳ ದರ್ಶನ

ಬೆಳ್ತಂಗಡಿ: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ, ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವು ಫೆ.25ರಿಂದ ಮಾ.1ರ ತನಕ ಮೂಡಬಿದಿರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿದೆ.

ಫೆ.25ರಂದು ಸಂಜೆ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮೂಹೂರ್ತ ನಡೆಯಲಿದೆ. ಫೆ.೨೬ರಂದು ಬೆಳಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮೂಹೂರ್ತ, ನಾಗದೇವರ ಸಾನಿಧ್ಯದಲ್ಲಿ ನವಕಲಶ, ಆಶ್ಲೇಷ ಬಲಿ ಮತ್ತು ಧೂಮಾವತಿ ಸಾನಿಧ್ಯ ಹಾಗೂ ಪರಿವಾರ ಸಾನಿಧ್ಯದಲ್ಲಿ ಶುದ್ದಿ ನವಕ ಕಲಶಾಭಿಷೇಕ, ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಗವತೀ ಸೇವೆ, ಧೂಮಾವತಿ ಬಲಿ ಉತ್ಸವ, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ರಾತ್ರಿ ಕಲ್ಲಾಲ್ದಾಯ ಗುಳಿಗ ನೇಮೋತ್ಸವ ಜರುಗುವುದು.

ಫೆ.27ರಂದು ಬೆಳಗ್ಗೆ ಗಣಪತಿ ಹೋಮ, ಧೂಮಾವತಿ ದೈವದ ಭಂಡಾರ ಇಳಿದು ನೇಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಧೂಮಾವತಿ ಬಲಿ ಉತ್ಸವ, ರಾತ್ರಿ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಕುಪ್ಪೆ ಪಂಜುರ್ಲಿ, ಕೊರತಿ ದೈವದ ನೇಮೋತ್ಸವ ನಡೆಯಲಿರುವುದು.


ಮಡಿಲು ಸೇವೆ-ಮಾತೆ ಮಕ್ಕಳ ಪುನೀತ ಸಮಾಗಮ:
ಫೆ.28 ರಂದು ಬೆಳಗ್ಗೆ ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಮಹಾಪೂಜೆಯ ನಂತರ ಮಡಿಲು ಸೇವೆ ಪ್ರಸಾದ ವಿತರಣೆ, ಸಂಜೆ ಧೂಮಾವತಿ ಬಲಿ ಉತ್ಸವ, ಬೈದರ್ಕಳರು ಗರಡಿ ಇಳಿಯುವುದು, ರಾತ್ರಿ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ನಡೆಯಲಿರುವುದು. ಬಳಿಕ ದೇಯಿ ಬೈದೈತಿ ಪ್ರಸಾದ ವಿತರಣೆ, ದೇಯಿ ಬೈದೈತಿ ಸಮಾಧಿಯಲ್ಲಿ ದೀಪಾರಾಧನೆ, ಬೈದರ್ಕಳ ದರ್ಶನ ಸೇವೆ, ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು. ಮಾ.1 ರಂದು ಬೆಳಿಗ್ಗೆ ಗಣಹೋಮ ಹಾಗೂ ಎಲ್ಲಾ ಸಾನಿಧ್ಯಗಳಲ್ಲಿ ಶುದ್ದಿ ಕ್ರಿಯೆಗಳು, ಕಲಶಾಭಿಷೇಕ, ಧ್ವಜಾವರೋಹಣ ಗುರುಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.

Related posts

ಯುವವಾಹಿನಿ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭ

Suddi Udaya

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

Suddi Udaya

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಅಳದಂಗಡಿ: ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಉದ್ಘಾಟನೆ

Suddi Udaya

ಬಾರ್ಯ: ಆನೆಪಲ್ಲ ನಿವಾಸಿ ಸೇಸಪ್ಪ ನಾಯ್ಕ್ ನಿಧನ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!