September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಬೆಟ್ಟುವಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದಬೆಟ್ಟು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಇಂದಬೆಟ್ಟು ಗ್ರಾಮದ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.14 ರಂದು ನಡೆಯಿತು.

ಮನೆಯ ಯಜಮಾನರಾದ ವಾಸು ಪೂಜಾರಿ ಉಂಬೆಜೆ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜಾತ್ರೋತ್ಸವಕ್ಕೆ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿ ಸದಸ್ಯರೂ, ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಕ್ಷೇತ್ರ ನಡೆದು ಬಂದ ಹಾದಿಯನ್ನು ವಿವರಿಸಿ ಜಾತ್ರಾ ಮಹೋತ್ಸವವನ್ನು ಯಶಸ್ಸು ಗಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಗ್ರಾಮದ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಬಿಲ್ಲವ ವೇದಿಕೆ ಇಂದಬೆಟ್ಟು ಇದರ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಂಬೆಜೆ, ಶಾಲಾ ಅಭಿವೃದ್ಧಿ ಸಮಿತಿ ಇಂದಬೆಟ್ಟು ಇದರ ಅಧ್ಯಕ್ಷ ಆನಂದ ಪೂಜಾರಿ ಕೊಪ್ಪದ ಕೋಡಿ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ಇಂದಬೆಟ್ಟು ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶ್ವತ್ ರಾಜ್ ಕಲ್ಲಾಜೆ, ಗೆಜ್ಜೆಗಿರಿ ಇಂದಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಯೋಗೀಶ್ ಕೊಪ್ಪದಕೋಡಿ, ಗೆಜ್ಜೆಗಿರಿ ಗ್ರಾಮ ಸಮಿತಿ ಇಂದಬೆಟ್ಟು ಇದರ ಕಾರ್ಯದರ್ಶಿ ಸತೀಶ್ ಕಟ್ನಡ್ಕ,ಗೆಜ್ಜೆಗಿರಿ ವಲಯ ಸಂಚಾಲಕರಾದ ನವೀನ್ ಕುವೇತ್ಯಾರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಿವಾಕರ ಪೂಜಾರಿ ಕುದುರು, ರಮೇಶ್ ಪೂಜಾರಿ ಕುದುರು, ಸುಂದರ ಪೂಜಾರಿ ಶಾಂತಿನಗರ ಕಲ್ಲಾಜೆ, ಜಗದೀಶ ಪೂಜಾರಿ ಕೊಪ್ಪದ ಕೋಡಿ, ರಂಜಿತ್ ಪೂಜಾರಿ ಕುವೆತ್ಯಾರು, ದಿನೇಶ್ ಪೂಜಾರಿ ಸುರಿಯಬೆಟ್ಟು, ಹರೀಶ್ ಪೂಜಾರಿ ಕಲ್ಲಾಜೆ,ಹರೀಶ್ ಪೂಜಾರಿ ಕೊಪ್ಪದ ಕೋಡಿ, ಸಂತೋಷ್ ಪೂಜಾರಿ ಪಡಂಬು, ಸುಜಾತ ಎಲ್, ನೀಲಮ್ಮ ಮುಂತಾದವರು ಉಪಸ್ಥಿತರಿದ್ದರು ವಿನೋದ್ ಪ್ರಸಾದ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು ಸಂತೋಷ್ ಪೂಜಾರಿ ಉಂಬೆಜೆ ಸ್ವಾಗತಿಸಿದರು. ಲಾಯಿಲ ವಲಯ ಸಂಚಾಲಕರೂ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಇಂದಬೆಟ್ಟು ಇದರ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರಿ ಪರಾರಿ ಇಂದಬೆಟ್ಟು ಕಾರ್ಯಕ್ರಮ ಸಂಯೋಜಿಸಿದ್ದರು.

Related posts

ಆರಂಬೋಡಿ ಹಿಂದೂ ಜಾಗರಣಾ ವೇದಿಕೆಯ ಶ್ರೀ ಕೃಷ್ಣ ಜನ್ಮಾಷ್ಟಮಿಯ ಉತ್ಸವದ ನೂತನ ಅಧ್ಯಕ್ಷರಾಗಿ ಪ್ರಣೀತ್ ಹಿಂಗಾಣಿ ಆಯ್ಕೆ

Suddi Udaya

ನಾಲ್ಕೂರು ಕುದ್ರೋಟ್ಟು ಪರಿಸರದಲ್ಲಿ ಗುಡ್ಡ ಕುಸಿತ, ರಸ್ತೆ ಬಂದ್

Suddi Udaya

ಕೊಕ್ಕಡ: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ: ಬೈಕ್ ಸವಾರ ತಾ. ಪಂ. ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಮ್ ರಿಗೆ ತೀವ್ರ ಗಾಯ

Suddi Udaya

ರುಪ್ಸಾ ನೀಡುವ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಷ್ಮಾ ಕೆ.ಎಸ್ ಆಯ್ಕೆ

Suddi Udaya

ಹೊಸಂಗಡಿ ಗ್ರಾ. ಪಂ. ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Suddi Udaya

ಕುತ್ಲೂರು ಉ.ಸ.ಹಿ. ಪ್ರಾಥಮಿಕ ಶಾಲೆಯಲ್ಲಿ “ಚಿಣ್ಣರ ಅಂಗಳ” ಉದ್ಘಾಟನೆ

Suddi Udaya
error: Content is protected !!