September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಅನುಗ್ರಹ ಆಂ.ಮಾ. ಶಾಲೆಯಲ್ಲಿ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಚಿಂತನಾ ದಿನಾಚರಣೆ


ಉಜಿರೆ: ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಸ್ಥಾಪಕರಾದ ಲಾರ್ಡ್ ಬ್ಯಾಡನ್ ಪಾವೆಲ್ ಹಾಗೂ ಲೇಡಿ ಓಲಾನಾ ಬ್ಯಾಡನ್ ಪಾವೆಲ್ ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಚಿಂತನಾ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲೆಯಲ್ಲಿ ಕಬ್ಸ್, ಬುಲ್ ಬುಲ್ ವಿದ್ಯಾರ್ಥಿಗಳಿಂದ ಸುಶಾವ್ಯ ಗೀತೆಗಳು ಹಾಗೂ ನೃತ್ಯವನ್ನು ಪ್ರದರ್ಶನ ಮಾಡಿದರು. ಬುಲ್ ಬುಲ್ ವಿದ್ಯಾರ್ಥಿನಿಯಾದ ಕುಮಾರಿ ಚರಿಷ್ಮ ದಿನದ ಮಹತ್ವವನ್ನು ತಿಳಿಸಿದರು. ಸ್ಕೌಟ್ ಗೈಡ್ಸ್ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ದೇಶಭಕ್ತಿ ಗೀತೆಯನ್ನು ಹಾಡಿದರು. ಪ್ರಾಂಶುಪಾಲರಾದ ವಂದನೀಯ ಫಾ! ವಿಜಯ್ ಲೋಬೊ ಶುಭಹಾರೈಸಿದರು. ಸ್ಕೌಟ್ ವಿದ್ಯಾರ್ಥಿನಿಯಾದ ಕ್ಲೆರಿಷಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ಪರ್ಶಾ ಸ್ವಾಗತಿಸಿ, ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ಸ್ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ್ರಮುಖರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ಗೇರುಕಟ್ಟೆ ಮೆದಿನದಲ್ಲಿ ‘ಸುಧನ್ವ ಮೋಕ್ಷ’ ತಾಳಮದ್ದಳೆ

Suddi Udaya

ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಪ್ರಕರಣ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ, ಪರಿಶೀಲನೆ

Suddi Udaya

ಗೋವಿಂದೂರು ಫ್ರೆಂಡ್ಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ

Suddi Udaya
error: Content is protected !!