23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಬ್ಧಿ ಸಾಂಸ್ಕೃತಿಕ ಹಬ್ಬ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಯಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾ ಕೇಂದ್ರದ ಮುಖಾಂತರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಯಕ್ಷಗಾನ ಹಾಗೂ ಸೆಮಿ ಕ್ಲಾಸಿಕಲ್ ತರಗತಿಗಳು, ಹಾಗೂ ಪಾಶ್ಚಿಮಾತ್ಯ ಶೈಲಿಯ ನೃತ್ಯ ತರಗತಿಗಳು ನಡೆಯುತ್ತಿದ್ದು ಆ ತರಗತಿಯಲ್ಲಿ ವಿದ್ಯಾರ್ಥಿಗಳು ಕಲಿತಂತಹ ಕಲೆಗಳನ್ನು ಅನಾವರಣಗೊಳಿಸುವ ಸಲುವಾಗಿ ಕಲಾಬ್ಧಿ ಎನ್ನುವ ಸಾಂಸ್ಕೃತಿಕ ಸ ಹಬ್ಬವನ್ನು ಆಯೋಜಿಸಲಾಗಿತ್ತು.

ಯಕ್ಷಗಾನ ಕಲಾವಿದರು ಹಾಗೂ ಪ್ರಗತಿಪರ ಕೃಷಿಕ ಗೋವಿಂದ ಭಟ್ ನಿಡ್ಲೆ ರವರು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿಧ್ಯಾರ್ಥಿಗಳಿಗೆ ಬದುಕಿಗೆ ಬೇಕಾದ ಜೀವನ ಮೌಲ್ಯಗಳು, ವಿದ್ಯೆಯ ಮಹತ್ವ, ಸಂಸ್ಕೃತಿ ಸಂಸ್ಕಾರಗಳ ಅಗತ್ಯ ಎಂಬಿತ್ಯಾದಿ 10 ಹಲವು ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಬಳಿಕ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಶ್ಚಿಮಾತ್ಯ ಶೈಲಿಯ ನೃತ್ಯ ಪ್ರದರ್ಶನ, ಯಕ್ಷಗಾನ ‘ಸುದರ್ಶನ ವಿಜಯ ‘ ಸೆಮಿ ಕ್ಲಾಸಿಕಲ್ ನೃತ್ಯ ‘ಶ್ರೀ ಕೃಷ್ಣ ಲೀಲಾ ವೈಭವ’ ಅತ್ಯಂತ ಸಂಭ್ರಮದಿಂದ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿ ಕುಮಾರಿ ಭಾರ್ಗವಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಅಮೀತ್ ಅತಿಥಿಗಳ ಕಿರುಪರಿಚಯವನ್ನು ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯನ್ನು ಶಾಲಾ ಸಹ ಶಿಕ್ಷಕಿ ಶ್ರೀಮತಿ ಆಶಾ ಕುಮಾರಿ ಪಿ.ನಡೆಸಿಕೊಟ್ಟರು.
ಕುಮಾರಿ ಚಿಂತನ ವಂದನಾರ್ಪಣೆ ಗೈದರು.

Related posts

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲೆಯಲ್ಲಿ ಎನ್‌ಸಿಸಿ ಮತ್ತು ಭಾರತೀಯ ಸೇವಾದಳ ಉದ್ಘಾಟನೆ

Suddi Udaya

ರಾಜ್ಯದಲ್ಲಿ ಕಾಂಗ್ರೇಸ್‌ ಸರಕಾರ ಬಂದ ಮೇಲೆ ಎಗ್ಗಿಲ್ಲದೆ ನಡೆಯುತ್ತಿರುವ ತುಷ್ಟೀಕರಣ ನೀತಿ: ಪ್ರತಾಪಸಿಂಹ ನಾಯಕ್

Suddi Udaya

ಜ.4: ಮರೋಡಿ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲನೆ ನಡೆಸಿದ ಹೈಕೋರ್ಟ್: ಸರಕಾರ, ಮೂಲದೂರುದಾರರು ಅಥವಾ ಸಂತ್ರಸ್ತ ಕುಟುಂಬ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂದ ನ್ಯಾಯಪೀಠ

Suddi Udaya
error: Content is protected !!