22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುವರ್ಣ ಸಾಂಸ್ಕೃತಿಕ ವೈಭವ: ಜೋಡು ಜೀಟಿಗೆ ನಾಟಕ ಸಾವಿರಾರು ಜನರಿಂದ ವೀಕ್ಷಣೆ : ಸಾಂಸ್ಕೃತಿಕ ರಾಯಭಾರಿ ಸಂಪತ್ ಬಿ ಸುವರ್ಣರವರಿಗೆ ವ್ಯಾಪಕ ಮೆಚ್ಚುಗೆ

ಬೆಳ್ತಂಗಡಿ:ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜರಗಿದ 16ನೆ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಹೊಸ ಇತಿಹಾಸ ಸೃಷ್ಟಿಸಿ ದಾಖಲೆ ಬರೆದಿದೆ. ಕಳೆದ 15 ವರ್ಷಗಳಲ್ಲಿ ಸುವರ್ಣ ಆರ್ಕೇಡ್ ಆವರಣದಲ್ಲಿ ಜರಗುತ್ತಿದ್ದ ಕಾರ್ಯಕ್ರಮ ಅಪಾರ ಜನಪ್ರಿಯತೆ ಪಡೆಯುತ್ತ ಜನಸಂದಣಿ ಹೆಚ್ಚಳವಾಗಿ ಕಲಾಭಿಮಾನಿಗಳ ವ್ಯವಸ್ಥಿತ ವೀಕ್ಷಣೆಗೋಸ್ಕಾರ ಮಾರಿಗುಡಿ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು .

ಕುತ್ಯಾರು ಶ್ರೀ ಸೋಮನಾಥಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ಜರಗಬೇಕಿದ್ದ ನಾಟಕ ತಾಂತ್ರಿಕ ಅಡಚಣೆ ಉಂಟಾಗಿ ಮರುದಿನಕ್ಕೆ ಮುಂದೂಡಲಾಗಿತ್ತು, ನಿಗದಿತ ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭಗೊಂಡು ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಸಹಸ್ರಾರು ಸಂಖ್ಯೆಯ ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಲು ಬಂದ ಜನರಿಂದಾಗಿ ಮಾರಿಗುಡಿ ಮೈದಾನ ಹೌಸ್ ಫುಲ್ ಎನಿಸಿತು. ಸಂಪತ್ ಸುವರ್ಣರವರ ಕಲ್ಪನೆಯ ಸುವರ್ಣ ರಂಗ ಸಮ್ಮಾನ 2026, ಭಾಷಣಗಳಿರದ ಸಭಾ ಕಾರ್ಯಕ್ರಮ ರಹಿತ ನಿರ್ವಹಣೆ, ತುಳುನಾಡ ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ, ಶಿಸ್ತು ಬದ್ಧ ವ್ಯವಸ್ಥಿತ ದಕ್ಷ ಸಂಘಟನೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

Suddi Udaya

ಸರಳಿಕಟ್ಟೆ: ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್: ಅಜಿಲಮೊಗರು – ಸರಳಿಕಟ್ಟೆ- ಉಪ್ಪಿನಂಗಡಿ ಸಂಪರ್ಕ ಕಡಿತ

Suddi Udaya

ವಿಶ್ವಕರ್ಮ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಇತಿಹಾಸ ಪ್ರಸಿದ್ದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕುಂಭಾಭಿಷೇಕ: ಅಧ್ಯಕ್ಷರಾಗಿ ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಕಾರ್ಯಾಧ್ಯಕ್ಷರಾಗಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಆಯ್ಕೆ

Suddi Udaya

ಕಣಿಯೂರು ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಮತ್ತು ವಿಶೇಷ ಗ್ರಾಮಸಭೆ

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya
error: Content is protected !!