ಉರುವಾಲು: 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಗೊಂಡಿರುವ ಬೆಂಳ್ತಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜದಲ್ಲಿರುವ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಸಾನಿಧ್ಯದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದಗಳೊಂದಿಗೆ ಫೆ.20ರಿಂದ 22ರ ವರೆಗೆ ದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೇಣೂರು ಕುಂಞೆಡಿ ವೇದಮೂರ್ತಿ ಶ್ರೀ ಕೆ.ಲಕ್ಷ್ಮೀ ನಾರಾಯಣ ಕಾರಂತರ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳು ಮೂಲಕ ವಿಜೃಭ್ರಂಣೆಯಿAದ ನಡೆಯಿತು.
ಇಂದು (ಫೆ.22) ಗಣಪತಿ ಹೋಮ, ಅಧಿವಾಸೋದ್ವಾರ, ವನಶಾಸ್ತಾರ ಮತ್ತು ವೀರಭದ್ರ ದೇವರ ಪ್ರತಿಷ್ಠೆ, ಕಲಶಾಭಿಷೇಕ ಅವಸ್ತಾರ ಪ್ರೋಕ್ಷಣೆ, ಮಹಾಪೂಜೆ, ಪಲ್ಲಪೂಜೆ, ಪ್ರತಿಷ್ಠಾಬಲಿ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ, ಭಜನೆ ನಡೆಯಿತು.
ನೂರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಲ್ ಕೆ.ಧರಣ್ ರಾಜ್ ಮಾಣಿಯವರಿಂದ ಹರಿನಾಮ ಸಂಕೀರ್ತನಾ, ಸಂಜೆ ಯಕ್ಷಗಾನ-ಜಾಂಬವತಿ ಕಲ್ಯಾಣ ನಡೆಯಲಿದೆ.











