September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾರಿಂಜ ಶ್ರೀ ವನಶಾಸ್ತಾರ-ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉರುವಾಲು: 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಗೊಂಡಿರುವ ಬೆಂಳ್ತಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜದಲ್ಲಿರುವ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಸಾನಿಧ್ಯದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದಗಳೊಂದಿಗೆ ಫೆ.20ರಿಂದ 22ರ ವರೆಗೆ ದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೇಣೂರು ಕುಂಞೆಡಿ ವೇದಮೂರ್ತಿ ಶ್ರೀ ಕೆ.ಲಕ್ಷ್ಮೀ ನಾರಾಯಣ ಕಾರಂತರ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳು ಮೂಲಕ ವಿಜೃಭ್ರಂಣೆಯಿAದ ನಡೆಯಿತು.

ಇಂದು (ಫೆ.22) ಗಣಪತಿ ಹೋಮ, ಅಧಿವಾಸೋದ್ವಾರ, ವನಶಾಸ್ತಾರ ಮತ್ತು ವೀರಭದ್ರ ದೇವರ ಪ್ರತಿಷ್ಠೆ, ಕಲಶಾಭಿಷೇಕ ಅವಸ್ತಾರ ಪ್ರೋಕ್ಷಣೆ, ಮಹಾಪೂಜೆ, ಪಲ್ಲಪೂಜೆ, ಪ್ರತಿಷ್ಠಾಬಲಿ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ, ಭಜನೆ ನಡೆಯಿತು.

ನೂರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಲ್ ಕೆ.ಧರಣ್ ರಾಜ್ ಮಾಣಿಯವರಿಂದ ಹರಿನಾಮ ಸಂಕೀರ್ತನಾ, ಸಂಜೆ ಯಕ್ಷಗಾನ-ಜಾಂಬವತಿ ಕಲ್ಯಾಣ ನಡೆಯಲಿದೆ.

Related posts

ಬೆಳ್ತಂಗಡಿ ಜೆಕಾಂ ನೂತನ‌ ಅಧ್ಯಕ್ಷರಾಗಿ ಉದ್ಯಮಿ ವಿಶಾಲ್ ಅಗಷ್ಟೀನ್ ಆಯ್ಕೆ

Suddi Udaya

ಅಂಡಿಂಜೆ ಗ್ರಾ.ಪಂ. ನಿಸರ್ಗ ಸಂಜೀವಿನಿ ಒಕ್ಕೂಟದಿಂದ ವ್ಯಾಪಾರ ಅಭಿವೃದ್ಧಿ ಯೋಜನೆ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಪವರ್ ಆನ್‌ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10ರಿಂದ 50 ರಷ್ಟು ರಿಯಾಯಿತಿ

Suddi Udaya

ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ

Suddi Udaya

ನಾರಾವಿ ವೈಶಾಲಿ ಪರಿಸರದಲ್ಲಿ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿತ: ಸಿಡಿಲಿನ ರಭಸಕ್ಕೆ ಸುಟ್ಟು ಕರಕಲಾದ ಮನೆಯ ವಸ್ತುಗಳು, ಅಪಾಯದಿಂದ ಪಾರಾದ ತಾಯಿ- ಮಗಳು

Suddi Udaya

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya
error: Content is protected !!