ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆ ಮಾಡಿಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಕಿಯರು

ಬೆಳ್ತಂಗಡಿ : ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಹೋಗುತ್ತಿದ್ದಾಗ ದಾರಿ ಮಧ್ಯೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಫೆ.23 ರಂದು ಬೆಳಗ್ಗಿನ ಜಾವ ಹೆರಿಗೆಗೆಂದು ಬಂದಿದ್ದ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಲೀಲಾವತಿ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು.ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲೇ ಹೆರಿಗೆಯಾಗಬೇಕೆಂಬ ಅಭಿಲಾಷೆಯೊಂದಿಗೆ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಇಬ್ಬರು ಶುಶ್ರೂಶಕಿಯರ ಜೊತೆಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ತುರ್ತು ವಾಹನದಲ್ಲಿ ವೈದ್ಯರು ಮಂಗಳೂರಿಗೆ ಕಳುಹಿಸಿದ್ದರು.

ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪಿಸುತ್ತಿದ್ದಂತೆ ಮಹಿಳೆಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಕಾರ್ಯಪ್ರವರ್ತರಾದ ಶುಶ್ರೂಶಕಿಯರಾದ ಸಿಸ್ಟರ್ ಕುಮುದ ಹಾಗೂ ಸಿಸ್ಟರ್ ಸೌಮ್ಯಾ.ಎಸ್ ಗಂಡು ಮಗುವಿಗೆ ಆಂಬ್ಯುಲೆನ್ಸ್ ವಾಹನದೊಳಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ದಿನೇಶ್ ಗೌಡ ಅವರ ಸಮಯಪ್ರಜ್ಞೆಯಿಂದ ಅತ್ಯಂತ ಕಡಿಮೆ ಸಮಯದಿಂದ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ತಲುಪಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

Related posts

ಸವಣಾಲು ನಂದಗೋಕುಲ ಪಾರ್ಮ್ ಹೌಸ್ ನಲ್ಲಿ ಯಕ್ಷಗಾನ ತರಗತಿ ಪ್ರಾರಂಭ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ: ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ಬಳಂಜ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ ಜೈನ್ ಅವರಿಗೆ ಡಾಕ್ಟರೇಟ್ ಪದವಿ

Suddi Udaya

ಆ. 5: ಉಜಿರೆ ಎಸ್‌.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕಾ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya
error: Content is protected !!