September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭವು ಶಾಲಾ ಸಂಚಾಲಕರಾದ ವಂ| ಫಾ| ಅಬೆಲ್ ಲೋಬೊರವರ ಆಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು. ಯಲ್.ಕೆ.ಜಿ ಪುಟಾಣಿಗಳ ಪ್ರಾರ್ಥನಾ ನೃತ್ಯದ ನಂತರ ಯು.ಕೆ.ಜಿ. ಪುಟಾಣಿಗಳು ತಮ್ಮ ಮುಗ್ಧ ಮಾತಿನ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.

ಮುಂದಕ್ಕೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಚಾಲಕರಾದ ವಂ| ಫಾ| ಅಬೆಲ್ ಲೋಬೊರವರು ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾದ ಅನುಗ್ರಹ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಮೋನಿಕಾ ನಿಲೋಫರ್ ಡಿ’ಸೋಜ ರವರು ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಮಕ್ಕಳಿಗೆ ಶುಭ ಹಾರೈಸುತ್ತಾ ಪದವಿ ಪ್ರದಾನ ಗೀತೆಯನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ವಂ!ಫಾ! ಡಾ! ವಿಜಯ್ ಲೋಬೊ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿರುವ ಪ್ರಯುಕ್ತ ಶಾಲಾ ವತಿಯಿಂದ ಅಭಿನಂದನಾ ಸನ್ಮಾನ ನಡೆಸಲಾಯಿತು. ಸಮಾರಂಭದ ಆಧ್ಯಕ್ಷರಾದ ವಂ! ಫಾ! ಅಬೆಲ್ ಲೋಬೊರವರು ಆಧ್ಯಕ್ಷೀಯ ಭಾಷಣ ಮಾಡುತ್ತಾ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಕೋರಿದರು.

ವಿದ್ಯಾರ್ಥಿ ಶಾಶ್ವತ್ ರಾವ್ ನಿರೂಪಿಸಿದ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿ’ಸೋಜ, ಕಾರ್ಯದರ್ಶಿ ಮರ್ಲಿನ್ ಡಿ’ಸೋಜ ಹಾಗೂ ಪೋಷಕ ಪ್ರತಿನಿಧಿಯಾದ ಅಶ್ಮಿತಾ ಹಾಜರಿದ್ದರು. ಪೂರ್ವ ಪ್ರಾಥಮಿಕ ಸಹಶಿಕ್ಷಕಿ ಗ್ರೇಸಿ ಸಲ್ಡಾನ್ಹ, ಶ್ರೀಮತಿ ವಿನ್ನಿ ಮರಿಯ, ಅಕ್ಷತಾ, ಪ್ರಣೀತಾ ಪೆರಾವೊ ಹಾಗೂ ಗೀತಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya

ನಾರಾವಿ: ಸಂತ ಅಂತೋನಿ ಕಾಲೇಜಿನಲ್ಲಿ ‘ಫೋಕ್ಸೋ ಕಾಯ್ದೆ ಮತ್ತು ವ್ಯಸನಮುಕ್ತ ಕಾಲೇಜು’ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಕ್ರೈಸ್ಟ್ ಅಕಾಡಮೆ (ಐಸಿಎಸ್ಇ) ಮುಂಡಾಜೆ ಶಾಲೆಗೆ ಶೇ 100 ಫಲಿತಾಂಶ

Suddi Udaya

ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ ಕುರಿತು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

Suddi Udaya

ರೆಖ್ಯ: ಹೆದ್ದಾರಿ ಪರಕ್ಕಳದಲ್ಲಿ ಲಾರಿ ಪಲ್ಟಿ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya
error: Content is protected !!