27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೆಡ್ ಕ್ರಾಸ್ ತಂಡ ಕಳೆಂಜ ರಾಮಣ್ಣ ಗೌಡರ ಮನೆಗೆ ಭೇಟಿ

ಬೆಳ್ತಂಗಡಿ: ವಿವಿಧ ಕಾರಣಕ್ಕಾಗಿ ಹಾಸಿಗೆ ಹಿಡಿದಿರುವ ರೋಗಿಗಳನ್ನು ಭೇಟಿ ನೀಡಿ, ಅವರಿಗೆ ಆತ್ಮ ಸ್ಥೈರ್ಯ ಕೊಡುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ತಂಡ ಹಲವಾರು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಇಂದು ಕಳೆಂಜ ಗ್ರಾಮದ ರಾಮಣ್ಣ ಗೌಡರ ಮನೆಗೆ ಭೇಟಿ ನೀಡಿತು.

ಕಳೆಂಜ ಗ್ರಾಮದ ರಾಮಣ್ಣ ಗೌಡ ಸುಮಾರು 26 ವರ್ಷಗಳ ಹಿಂದೆ ಕೃಷಿ ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿ ಎದ್ದು ನಡೆಯಲಾರದ ಸ್ಥಿತಯಲ್ಲಿದ್ದು, ಬೆಳ್ತಂಗಡಿ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಹರಿದಾಸ್ ಎಸ್.ಎಮ್ ರವರ ತಂಡ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ, ನಿರ್ದೇಶಕರಾದ ಸುಕನ್ಯಾ ಹೆಚ್, ಸುಜೀತ್ ರಾವ್ ಉಜಿರೆ ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಪಂಚಾಯತ್ ನಲ್ಲಿ ಉಚಿತ ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ನಾಳ : ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

Suddi Udaya

ಗುರುವಾಯನಕೆರೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ.

Suddi Udaya

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ನೂತನ ಸಂಸದ ಬ್ರಿಜೇಶ್ ಚೌಟ ಭೇಟಿ: ಮಂಡಲದ ವತಿಯಿಂದ ನೂತನ ಸಂಸದರಿಗೆ ಅಭಿನಂದನೆ

Suddi Udaya
error: Content is protected !!