September 6, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ ಗ್ರಾಮ ಪಂಚಾಯತ್‌ನಲ್ಲಿ ರೈತ ತರಬೇತಿ ಕಾರ್ಯಾಗಾರ

ಕಲ್ಮಂಜ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಹಾಗೂ ಸ್ಕಂದ ಸಂಜೀವಿನಿ ಒಕ್ಕೂಟ ಕಲ್ಮಂಜ ಇದರ ಸಹಯೋಗದೊಂದಿಗೆ ಫೆ.24ರಂದು ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕ ರಮೇಶ್ ಅವರ ಉಪಸ್ಥಿತಿಯಲ್ಲಿ ಒಂದು ದಿನದ ರೈತ ತರಬೇತಿಯು ಕಲ್ಮಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಉಷಾ ಡಿಸೋಜ ಹಾಗೂ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗಣೇಶ್ ಮಾತನಾಡಿ ರೈತರು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಸುಲೈಮಾನ್ ಬೆಲಾಲ್ ಅಣಬೆ ಕೃಷಿ ತರಬೇತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿ ಕೊಟ್ಟರು.

ಪ್ರಗತಿಪರ ರೈತ ಬಿಜು ಸರ್ ಮೊಟ್ಟೆ ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ಹಾಗೂ ತಮ್ಮ ಅನುಭವಗಳನ್ನು ವಿವರವಾಗಿ ತಿಳಿಸಿದರು. ಪಶುವೈದ್ಯಾಧಿಕಾರಿ ಯತೀಶ್ ಕುಮಾರ್ ಮೊಟ್ಟೆ ಕೋಳಿ ಸಾಕಾಣಿಕೆಯ ಬಗ್ಗೆ ಪ್ರೋಜೆಕ್ಟರ್ ಮೂಲಕ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ 60ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.

ಕೃಷಿ ಸಖಿ ಪುಷ್ಪಲತಾ ಸ್ವಾಗತಿಸಿದರು. ಜಯಂತಿ ಪ್ರಾರ್ಥಿಸಿದರು.

Related posts

ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಎಸ್.ಡಿ.ಎಂ ಪ.ಪೂ ಕಾಲೇಜಿನ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ಅಕ್ಷರ ಪಿ. ಆಯ್ಕೆ

Suddi Udaya

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ಹರೀಶ್ ಕುಮಾರ್ ಪಿಕ್ಸ್

Suddi Udaya

ಗುರುವಾಯನಕೆರೆ ವಿಕಾಸ ವಿ.ಸ. ಸಂಘದ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ , ರೂ. 262.73 ಕೋಟಿ ವ್ಯವಹಾರ

Suddi Udaya

ಭಾರೀ ಮಳೆ: ಮುಂಡೂರುನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ; ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ

Suddi Udaya
error: Content is protected !!