37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಲೆಂಗಲ್ಲು ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭಾ ಕಾರ್ಯಕ್ರಮ: ಶ್ರದ್ಧಾ ಭಕ್ತಿಯಿಂದ ಭಗವಂತನನ್ನು ಆರಾಧಿಸಿ – ಶ್ರೀ ಡಾ.ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು

ಪದ್ಮುಂಜ:  ರುದ್ರ ದೇವರು ಮನಸ್ಸಿಗೆ ಶಕ್ತಿ ಹಾಗೂ ಬಲ ತುಂಬುವ ದೇವರಾಗಿದ್ದಾರೆ. ನಮ್ಮೂರಿನ ದೇಗುಲ ಜೀರ್ಣೋದ್ದಾರಗೊಂಡಲ್ಲಿ  ಗ್ರಾಮ ಬೆಳಗುತ್ತದೆ. ಆಗಾಗಿ ನಮ್ಮ ದೇಗುಲವನ್ನು ಸ್ವಚ್ಛತೆಯಿಂದ ಇರಿಸಿ ಸದಾಕಾಲ ಭಗವಂತ ಆರಾಧನೆ ಮಾಡಬೇಕು. ದೇವರಲ್ಲಿ ಸ್ವಯಂ ಶಕ್ತಿ ಇದೆ ಆದ್ದರಿಂದ ಶ್ರದ್ಧಾ ಭಕ್ತಿಯಿಂದ ಭಗವಂತನನ್ನು ಆರಾಧಿಸಬೇಕು ಎಂದು ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ವಿಷ್ಣು ತೀರ್ಥ ಪೀಠಂ, ಕುಕ್ಕೆ ಸುಬ್ರಹ್ಮಣ್ಯದ  ಸುಬ್ರಹ್ಮಣ್ಯ ಮಠದ ಶ್ರೀ ಡಾ.ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅವರು ಸೋಮವಾರ ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಚಿಂತಕ ದಾಮೋದರ್ ಶರ್ಮ ಕಾರ್ಕಳ ಮಾತನಾಡಿ ಪಾಶ್ಚತ್ಯ ಸಾಂಸ್ಕೃತಿಕಗಳನ್ನು ಅನುಕರಿಸದೆ ಭಾರತೀಯ ಸಾಂಸ್ಕೃತಿಕವ ನ್ನು ಪ್ರತಿಪಾದಿಸಿಕೊಂಡು ಮುನ್ನಡೆಯಬೇಕು. ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆಸದೆ ಮಾನವೀಯತೆಯಿಂದ ಸಮಾಜದಲ್ಲಿ ಬದುಕಬೇಕು ಎಂದು ಧಾರ್ಮಿಕ ಉಪನ್ಯಾಸ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವಶಂಕರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಸುರತ್ಕಲ್ ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಆಶಾಲತಾ ಪಿ., ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಾಧ್ಯಕ್ಷ ಕೆ. ಎನ್. ಸುಧೀರ್ ಕುಮಾರ್ ಹಲೇಜಿ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಪಿಲಿಗೂಡು ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಕೇಂದ್ರ ಪದ್ಮನಾಭ ಶಿಲ್ಪಿ, ಪದ್ಮುಂಜ ಹಾ. ಉ. ಸ. ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಗೆರೋಡಿ, ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ರವಿ. ಎಸ್., ಬ್ರಹ್ಮಕಲಶೋತ್ಪವ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ ಕೊಲ್ಲೊಟ್ಟು, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಫುಲ್ಲಚಂದ್ರ ಅಡ್ಯಂತಾಯ ಮೊಗರೋಡಿ ವರದಿ ವಾಚಿಸಿದರು. ಜಯರಾಮ್ ಶೆಟ್ಟಿ ಸ್ವಾಗತಿಸಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಿತೇಶ್ ಜೈನ್ ವಂದಿಸಿ, ಮಾಧವ ಗೌಡ ಹಾಗೂ ಶೋಭಾ ಪಿ. ಎಸ್ ನಿರೂಪಿಸಿದರು. ಅನುವಂಶೀಯ ಮೊಕ್ತೇಸ ಚಿದಾನಂದ ರಾವ್ ಕೊಲ್ಲಾಜೆ ಮಲೆಂಗಲ್ಲುದ ಮೂರ್ತಿ ಧ್ವನಿ ಸುರಳಿ ಬಿಡುಗಡೆ ಗೊಳಿಸಿದರು.

ಮಾ.2 ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ವೈಭವ, ಸಂಜೆ 5-30 ರಿಂದ ಪದ್ಮುಂಜ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಸಾಂಸ್ಕೃತಿಕ ನೃತ್ಯ ನಡೆಯಲಿದೆ. ರಾತ್ರಿ 9 ರಿಂದ ನೃತ್ಯ ಮತ್ತು ಸಂಗೀತ ವೈಭವ ನಡೆಯಿತು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ರಂಜಿತ್ ಎಚ್ ಡಿ ಬಳಂಜರವರಿಗೆ ಜೆಸಿಯ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ

Suddi Udaya

ಬಳಂಜ ಬೊಂಟ್ರೋಟ್ಟುಗುತ್ತು ದೈವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಆಶ್ರಯದಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಶಕುಂತಳಾ ನಿಧನ

Suddi Udaya

ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ CSEET ಓರಿಯೆಂಟೇಷನ್ ಕಾರ್ಯಾಗಾರ

Suddi Udaya
error: Content is protected !!