25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರುಡ್‌ಸೆಟ್‌ನಲ್ಲಿ ಅಕೌಂಟಿಂಗ್ ಟ್ಯಾಲಿ ತರಬೇತಿ ಸಮಾರೋಪ

ಉಚಿತ ಕೌಶಲ್ಯಾಭಿವೃದ್ಧಿ ಮೂಲಕ ಉದ್ಯೋಗಾವಕಾಶಗಳಿಗೆ ಹೊಸ ದಾರಿ ಉಜಿರೆಯ RUDSET Institute ಸಂಸ್ಥೆಯಲ್ಲಿ ನಡೆದ ಅಕೌಂಟಿಂಗ್ ಟ್ಯಾಲಿ (Assistant Bookkeeper) ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸಡಗರದಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುರೇಶ್ ವಿಟ್ಲ ಅವರು ಮಾತನಾಡಿ, “ಇಂದಿನ ಆಧುನಿಕ ವ್ಯವಹಾರದಲ್ಲಿ ಲೆಕ್ಕಾಚಾರ ಅತ್ಯಂತ ಮಹತ್ವದ್ದಾಗಿದೆ. ತೆರಿಗೆ ಲೆಕ್ಕಾಚಾರವನ್ನು ವೃತ್ತಿಯಾಗಿ ಆಯ್ಕೆ ಮಾಡಬಹುದಾದಷ್ಟು ಅವಕಾಶಗಳು ಇಂದು ಲಭ್ಯವಿವೆ. ಇಂತಹ ಪ್ರಾಯೋಗಿಕ ಹಾಗೂ ಉದ್ಯೋಗೋನ್ಮುಖ ವಿದ್ಯೆಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್‌ಸೆಟ್ ಸಂಸ್ಥೆಯ ಮೂಲಕ ಉಚಿತವಾಗಿ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಬರುವ ದಿನಗಳಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತವೆ. ಅವನ್ನು ಸರಳವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ನಿರಂತರ ಅಭ್ಯಾಸ ಅಗತ್ಯ. ಹೆಚ್ಚು ಅಭ್ಯಾಸ ಮಾಡಿ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಅಜೇಯ ವಹಿಸಿದ್ದರು. ಸಂಸ್ಥೆಯ ಹಿರಿಯ ಅಬ್ರಹಾಂ ಜೇಮ್ಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪ ಕಾರ್ಯದರ್ಶಿಯಾಗಿ ಮಡಂತ್ಯಾರಿನ ಅರುಣ್ ಪುರ್ಟಾಡೊ ನೇಮಕ

Suddi Udaya

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಚಾರ್ಮಾಡಿ ಜಾರುವ ರಸ್ತೆಗೆ ಮತ್ತೆ ರಫಿಂಗ್

Suddi Udaya

ತೆಕ್ಕಾರು ಪ್ಯಾಕ್ಸ್ ಮಹಾಸಭೆ : ರೂ.126 ಕೋಟಿ ವ್ಯವಹಾರ, ರೂ.32.59 ಲಕ್ಷ ಲಾಭ  ಶೇ. 7% ಡಿವಿಂಡೆಡ್ :  ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಚಾರ್ಮಾಡಿ, ಘಟಕ ಶ್ರೀ ರಾಮ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಹಿಂದೂ ಭಾಂಧವರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಉಜಿರೆ ಶ್ರೀ ಮಂಜುನಾಥ ಡ್ರೈವಿಂಗ್ ಸ್ಕೂಲ್ ಮಾಲಕ ಬಾಲಕೃಷ್ಣ ಶೆಣೈ ಹೃದಯಾಘಾತದಿಂದ ನಿಧನ

Suddi Udaya
error: Content is protected !!