28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸರ್ಕಾರಿ ಇಲಾಖಾ ಸುದ್ದಿ

ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿಸಿ-ಜಿಲ್ಲಾ ಚುನಾವಣಾಧಿಕಾರಿ

ಬೆಳ್ತಂಗಡಿ: ಚುನಾವಣಾ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ೨೦೦೨ ರ ಮತದಾರರ ಪಟ್ಟಿಗೆ ಸಂಬAಧಿಸಿದ ವಿವರಗಳನ್ನು ತಮ್ಮ ವ್ಯಾಪ್ತಿಗೆ ಸಂಬAಧಿಸಿದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ರವರಿಗೆ ಮಾಹಿತಿಯನ್ನು ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮ್ಯಾಪಿಂಗ್ ಅಂದರೆ 2002 ರ ಮತದಾರರ ಪಟ್ಟಿಯನ್ನು ೨೦೨೫ ರ ಮತದಾರರ ಪಟ್ಟಿಗೆ ಜೋಡನೆ ಮಾಡುವುದು. ಸಂತತಿ ಮ್ಯಾಪಿಂಗ್ ಅಂದರೆ, 2002 ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ / ತಾಯಿ / ಅಜ್ಜ / ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊAದಿಗೆ ಜೋಡನೆ ಮಾಡಿಕೊಳ್ಳುವುದು.

2002 ರ ಮತದಾರರಾಗಿದ್ದಲ್ಲಿ ನೀವು 2002 ರಲ್ಲಿ ವಾಸವಿದ್ದಂತಹ ವಿಧಾನ ಸಭಾ ಕ್ಷೇತ್ರ ಹೆಸರು /ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ ರವರಿಗೆ ಮತದಾರರು ಮಾಹಿತಿ ನೀಡಿ ಸಹಕರಿಸಿ.
ಒಂದು ವೇಳೆ ನೀವು 2002 ರಲ್ಲಿ ಮತದಾರರಾಗಿ ಇಲ್ಲದಿದ್ದಲ್ಲಿ, ನಿಮ್ಮ ತಂದೆ / ತಾಯಿ / ಅಜ್ಜ /ಅಜ್ಜಿಯವರು ವಾಸವಿದ್ದಂತಹ ವಿಧಾನ ಸಭಾ ಕ್ಷೇತ್ರದ ಹೆಸರು / ಸಂಖ್ಯೆ, ಭಾಗ ಸಂಖ್ಯೆ, ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ ರವರಿಗೆ ಮತದಾರರು ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2002 ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಈ ಕೆಳಗಿನ ಲಿಂಕ್ ಮೂಲಕ ಹುಡುಕಬಹುದು

https://ceo.karnataka.gov.in/search/en ಅಥವಾ https://voters.eci.gov.in/searchInSIR/S2UA4DPDF-JK4QWODSE

ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯವರ ದೂರವಾಣಿ ಸಂಖ್ಯೆ ಪಡೆಯಲು ಈ ಕೆಳಗಿನ ಲಿಂಕ್ ಮೂಲಕ ಹುಡುಕಬಹುದು https://electoralsearch.eci.gov.in/uesfmempmlkypo ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಯವರು ಕರೆ ಸ್ವೀಕರಿಸದ್ದಿದಲ್ಲಿ ಈ ಕೆಳಗಿನ ಲಿಂಕ್ ಮೂಲಕ Book ಮಾಡಬಹುದು (Book a Call with BLO) https://voters.eci.gov.in/home/bookACallRequest ಸಾರ್ವಜನಿಕರು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮ್ಯಾಪಿಂಗ್ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಹಕರಿಸುವಂತೆ ಕೋರಿದೆ.

Related posts

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮ

Suddi Udaya

ನಾವರ: ರಾಜಪಾದೆ ದಿ| ಕೊರಗು ಹೆಗ್ಡೆ ರವರ ಶ್ರದ್ದಾಂಜಲಿ ಸಭೆ

Suddi Udaya

ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು

Suddi Udaya

ಉಜಿರೆ: ಎಸ್.ಡಿ.ಎಂ ಪ ಪೂ ಕಾಲೇಜಿನಲ್ಲಿ ಆಟಿದ ಗೌಜಿ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಪ್ರಕಾಶ್ ಕೆ ರವರಿಗೆ ವೀಲ್ ಚೇರ್ ವಿತರಣೆ

Suddi Udaya

ಸಿ.ಎ. ಗ್ರೂಪ್ಸ್ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಕೊಲ್ಪಾಡಿ ಶಾಲಾ ಮಕ್ಕಳಿಗೆ ಕೊಡುಗೆಗಳ ಹಸ್ತಾಂತರ

Suddi Udaya
error: Content is protected !!