ಉಜಿರೆ: ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನೂತನ ವಿಜಯಗೋಪುರದ ಲೋಕಾರ್ಪಣಾ ಕಾರ್ಯಕ್ರಮವು ಮಾ.4ರಂದು ಜರುಗಿತು.
ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ವಿಜಯ ಗೋಪುರ ಲೋಕಾರ್ಪಣೆಗೊಳಿಸಿದರು.

ಕಾಸರಗೋಡು ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಪ್ರಜ್ವಲಿಸಿದರು.

ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಬಾರ್ಕೂರು ಶ್ರೀ ನವಾಕ್ಷರೀ ಸಂಸ್ಕೃತಿ ಚಿಂತಕ ದಾಮೋದರ ಶರ್ಮ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಉದ್ಯಮಿ ಶ್ರೀಪತಿ ಭಟ್, ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ, ಹಿಂದೂ ರಾಷ್ಟ್ರ ಸಭಾ ರಾಜ್ಯಾಧ್ಯಕ್ಷ ಪ್ರತಾಪ ಆರ್. ಗೌಡ, ಆರ್.ಪಿ. ಗ್ರೂಪ್ ಮಾಲಕ ಕರವೇ ರಾಮಮೂರ್ತಿ,ಪವಿತ್ರಪಾಣಿ ಶಿವರಾಮ ಪಡ್ವೆಟ್ನಾಯ, ವಿಜಯ ಗೋಪುರ ಸಮಿತಿ ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ವಿಜಯ ಗೋಪುರ ಸಮಿತಿ ಕೋಶಾಧಿಕಾರಿ ರಾಜೇಶ್ ಪೈ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಮಹಿಳಾ ವಿಭಾಗ ಸಂಚಾಲಕಿ ಜಯಶ್ರೀ ಪ್ರಕಾಶ ಗೌಡ, ಅನಂತಮೋಹನ ಮೂಡಣ್ಣಾಯರು, ಮಂಜುನಾಥ, ಮಾತೃಶಕ್ತಿ ಶಿಲಾ ಸಂಚಯನ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಗೌರವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.












