ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉರುವಾಲುಪದವು: ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಭಾಶ್ರೀರ್ವಾದಗಳೊಂದಿಗೆ ಎಡಪದವು ಶ್ರೀ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಸ ಭಟ್ ಅಂತರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾ. 4ರಂದು ಚಾಲನೆ ದೊರೆಯಿತು.

ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಗಣಯಾಗ, ತೋರಣ ಮುಹೂರ್ತ, ನವಗ್ರಹ ಯಾಗ, ಅಶ್ಲೇಷ ಬಲಿ, ಭಜನೆ, ವಿವಿಧ ವೈಧಿಕ ಕಾರ್ಯಕ್ರಮಗಳ ನಡೆಯುತ್ತಿದೆ. ಸೀತಾರಾಮ ನಾಯ್ಕ ಪಿ. ಏಣಿತಡ್ಕ ಉಗ್ರಾಣ ಉದ್ಘಾಟಿಸಿದರು. ಗುರುವಾಯನಕೆರೆ ಕಡಂಬು, ಸವಿನೆಲೆ ಲಕ್ಷ್ಮಣ ನಾಯ್ಕ ಕಾರ್ಯಾಲಯ ಉದ್ಘಾಟಿಸಿದರು. ತಾಲೂಕು ಮರಾಟಿ ಸಂಘ ಅಧ್ಯಕ್ಷ ಸತೀಶ್ ಹೆಚ್.ಎಲ್. ನೂತನ ಕೊಠಡಿ ಉದ್ಘಾಟಿಸಿದರು. ಪಲ್ಲಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಗುರುವಾಯನಕೆರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಅರಸಮಜಲ್, ರಾಘವ ನಾಯ್ಕ ಶ್ರೀ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯ್ಕ ಕುಪೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಪ್ರದೀಪ ನಾಯ್ಕ ಆನಡ್ಕ ಹಾಗೂ ಕೃಷ್ಣಪ್ಪ ನಾಯ್ಕ, ಕೋಶಾಧಿಕಾರಿ ಪುಷ್ಪಾನಂದ ನಾಯ್ಕ ಗಜಂತೋಡಿ, ಉರುವಾಲು ಮಹಮ್ಮಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ್ ನಾಯ್ಕ ಶ್ರೀ ಜಲದುರ್ಗಾ, ಉಪಾಧ್ಯಕ್ಷ ಚಿದಾನಂದ ನಾಯ್ಕ ಮತ್ರಕುಮೇರು, ಕಾರ್ಯದರ್ಶಿ ಉಮೇಶ್ ನಾಯ್ಕ ಎಂಜಿರಪಲ್ಕೆ, ಉರುವಾಲು ಮಹಮ್ಮಾಯಿ ಮಾರಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಸೀತಾರಾಮ ನಾಯ್ಕ, ಕೋಶಾಧಿಕಾರಿ ಹರೀಶ್ ನಾಯ್ಕ್ ಕುಪ್ಪೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಹೆಚ್.ಎಲ್, ಉಪಾಧ್ಯಕ್ಷ ಶೇಖರ್ ನಾಯ್ಕ ಹಲೇಜಿ, ಕಾರ್ಯದರ್ಶಿ ಕಿಶನ್ ನಾಯ್ಕ ಮಜ್ಜೆ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಆನಡ್ಕ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Related posts

ಆ.31: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ಬಾರ್ಯ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರವರಿಂದ ಮತ ಚಲಾವಣೆ

Suddi Udaya

ನಾವೂರು ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಣಿ-ವಿಕಸಿತ ಭಾರತ ಸಂಕಲ್ಪ ಸಭೆ

Suddi Udaya

ಉಜಿರೆಯ ಸುಲೋಚನರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

Suddi Udaya
error: Content is protected !!