ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಡಿರುದ್ಯಾವರ: ಅಕ್ರಮ ಮರಳು ಸಾಗಾಟಕ್ಕೆ ಯತ್ನ: ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಅಲೆಂಜಿಕಟ್ಟ ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಸಾಗಾಟ ಮಾಡಲು ಲಾರಿಗೆ ತುಂಬಿಸುತ್ತಿರುವ ಬಗ್ಗೆ ಮಾ.4 ರಂದು ಸಂಜೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಗುಡ್ಡೆ ನಿವಾಸಿ ನಿಜಾಮುದ್ದೀನ್(47) ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹನೀಫ್(44) ಎಂಬವರು KA-53-A-9796 ನಂಬರಿನ ಟಿಪ್ಪರ್ ಲಾರಿಯಲ್ಲಿ ಯಾವುದೇ ಸರಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು.

ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳದಿಂದ 3 ಲಕ್ಷದ 50 ರೂಪಾಯಿ ಮೌಲ್ಯದ ಒಂದು ಲಾರಿ, 6,500 ರೂಪಾಯಿ ಮೌಲ್ಯದ ಮರಳು,ಮರಳನ್ನು ಲಾರಿಗೆ ತುಂಬಿಸಲು ಉಪಯೋಗಿಸಿದ 150 ರೂಪಾಯಿ ಮೌಲ್ಯದ ಪ್ರೈಬರ್ ಬುಟ್ಟಿಗಳು 3 , 100 ರೂಪಾಯಿ ಮೌಲ್ಯದ ಹಾರೆ 1, 50 ರೂಪಾಯಿ ಮೌಲ್ಯದ ಕಬ್ಬಿಣದ ಬಕೆಟ್ 1, 2,500 ರೂಪಾಯಿ ಮೌಲ್ಯದ ಕಬ್ಬಿಣದ ಮೆಟ್ಟಿಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳಾದ ನಿಜಾಮುದ್ದೀನ್ ಮತ್ತು ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಕುಶಾಲಪ್ಪ ನಾಯ್ಕ್ ಅವರು ಮಾ.4 ರಂದು ನೀಡಿದ ದೂರಿನ ಮೇರೆಗೆ BNS -2023 (u/s-303(2),r/w3(5)),MMDR Act 1957(u/s-4(1),4(1A),21(1)(1A),KMMCR-1994(u/s-42,43,44) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

Suddi Udaya

ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನೆ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಲಾಯಿಲ ಸೈಂಟ್ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಸಿದ್ದಕಟ್ಟೆ ಮಹಿಳೆ ಕಳೆದುಕೊಂಡ ಹಣವಿದ್ದ ಬ್ಯಾಗ್ ನ್ನು ಹಿಂತಿರುಗಿಸಿದ ಗರ್ಡಾಡಿ ಯುವಕ ವರುಣ್ ಪೂಜಾರಿ: ಯುವಕನ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾರಿಂದ ಅಭಿನಂದನೆ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya
error: Content is protected !!