ಉಜಿರೆ: ಇತಿಹಾಸ ಪ್ರಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಬದುಕುಕಟ್ಟೋಣ ಬನ್ನಿ ತಂಡದ ಸಂಚಾಲಕರು,ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ,ವಿಜಯ ಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಕೆ. ಮೋಹನ್ ಕುಮಾರ್ ರವರ ವಿಭಿನ್ನ ಕಲ್ಪನೆಯೊಂದಿಗೆ ನಿರ್ಮಾಣಗೊಂಡು, ವಿಶೇಷ ಆಕರ್ಷಣೆಯೊಂದಿಗೆ ಜನರ ಮನಸೂರೆಗೊಳ್ಳುತ್ತಿರುವ “ಸುಪ್ರಸಾದ” ಭೋಜನ ಶಾಲೆಯಲ್ಲಿ ಅನ್ನದಾನ ಸೇವೆ ಮಾಡಲಿಚ್ಚಿಸುವ ಭಕ್ತಾಧಿಗಳಿಗೆ “ಮುಷ್ಠಿ ಅಕ್ಕಿ” ಎಂಬ ವಿಶೇಷ ಸೇವೆ ನಡೆಯುತ್ತಿದೆ.

ಭಾರತೀಯ ಪರಂಪರೆಯಲ್ಲಿ ಧರ್ನಕಾರ್ಯಗಳಿಗೆ ವಿಶೇಷ ಸ್ಥಾನಮಾನವಿದೆ. ಬ್ರಹ್ಮಕಲಶೋತ್ಸವದ ಸುಪ್ರಸಾದ ಭೋಜನ ಶಾಲೆಯ ಶ್ರೀ ಅನ್ನ ಪೂರ್ಣೇಶ್ವರಿಯ ಗುಡಿಯ ಸನ್ನಿಧಿಯಲ್ಲಿ ಈ ವಿಶೇಷ ಸೇವೆ ನಡೆಯುತ್ತಿದ್ದು ,ಅನ್ನದಾನ ಸೇವೆ ಮಾಡಲು ಇಚ್ಚಿಸುವವರು ಈ ಸೇವೆಯಲ್ಲಿ ಕೈ ಜೋಡಿಸಬಹುದಾಗಿದೆ.

ಈಗಾಗಲೇ ಕ್ಷೇತ್ರಕ್ಕೆ ಆಗಮಿಸುವ ಸ್ವಾಮೀಜಿಯವರು,ಗಣ್ಯರು,ಭಕ್ತರು ಸುಪ್ರಸಾದ ಭೋಜನಾಲಯದ ಅನ್ನಪೂರ್ಣೆಶ್ವರಿ ಗುಡಿಯಲ್ಲಿ ಕಲಶಗೆ ಅಕ್ಕಿ ಸಮರ್ಪಿಸುತ್ತಿದ್ದಾರೆ.ಪ್ರತಿನಿತ್ಯ ಸಾವಿರಾರು ಪ್ರಮಾಣದಲ್ಲಿ ಭಕ್ತರು ಶ್ರೀ ಜನಾರ್ದನ ಸ್ವಾಮಿ ದೇವಸ್ತಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸುತ್ತಿದ್ದು ಸುಪ್ರಸಾದ ಭೋಜನಾಲಯದಲ್ಲಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ.











