24.1 C
ಪುತ್ತೂರು, ಬೆಳ್ತಂಗಡಿ
September 10, 2026
ಧಾರ್ಮಿಕಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ವಿದ್ಯಾ ಸಂಸ್ಥೆಗೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಶ್ರೀ ಭೇಟಿ – ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಹೊಸ ನಗರ ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನ, ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಭೇಟಿ ನೀಡಿ, ಆಶೀರ್ವಚನ ನೀಡಿದರು.

ಅರಮಲೆ ಬೆಟ್ಟ ಕಾಲೇಜು ಆವರಣದಲ್ಲಿ ನಡೆದ ಶ್ರೀ ಗುರುಗಳ ದಿವ್ಯ ಸಾನಿದ್ಯ ಹಾಗೂ ಪಾದುಕಾ ಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಗುಣಮಟ್ಟದ ಹಾಗೂ ಸಂಸ್ಕಾರ ಭರಿತ ಶಿಕ್ಷಣದಿಂದ ರಾಷ್ಟ್ರ ಸೇವೆ ಮಾಡುವಂತ ಮನೋಭಾವ ಮಕ್ಕಳಲ್ಲಿ ಮೂಡುತ್ತದೆ. ಅಂಥ ಶಿಕ್ಷಣ ಎಕ್ಸೆಲ್ ವಿದ್ಯಾ ಸಂಸ್ಥೆಗಳಲ್ಲಿದೆ. ರಾಷ್ಟ್ರದ ಭವಿಷ್ಯ ನಿರ್ಮಿಸುವ ಎಕ್ಸೆಲ್ ನಂತಹ ಸಂಸ್ಥೆಗಳ ಜೊತೆ ಶ್ರೀ ಸಂಸ್ಥಾನ ಯಾವತ್ತೂ ಜೊತೆಗಿರುತ್ತದೆ ಎಂದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಮಾತಾ ಪಿತರಾದ ಶುಭಲತಾ – ಸತೀಶ್ ಕುಮಾರ್ ಜೈನ್ ಅವರು ಗುರುಗಳ ಪಾದ ಪೂಜೆ ನೆರವೇರಿಸಿದರು. ಸುಮಂತ್ ಕುಮಾರ್ ಜೈನ್ ಅವರು ಸ್ವಾಮಿಗಳಿಗೆ ಗೌರವಾರ್ಪಣೆ ಸಲ್ಲಿಸಿ, ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ರಾಮಚಂದ್ರಾಪುರ ಮಠದ ಗುರುಗಳು ನಮ್ಮ ಸಂಸ್ಥೆಗೆ ಪಾದಾರ್ಪಣೆ ಮಾಡಿರುವುದು ನಮ್ಮ ಪುಣ್ಯ ಎಂದರು. ಬಳಿಕ ಮಂತ್ರಾಕ್ಷತೆ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯರಾದ ಡಾ.ಪ್ರಜ್ವಲ್ ಕಜೆ, ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ವೇಣೂರು ವಿದ್ಯೋದಯ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಶಾಂತಿರಾಜ್ ಜೈನ್, ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ , ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Related posts

ಮದ್ದಡ್ಕ ಶ್ರೀ ರಾಮ ಸೇವಾ ಸಮಿತಿ, ವಿ.ಹಿಂ.ಪ. ಭಜರಂಗದಳ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ವೇಣೂರು ತಾಲೂಕು ಕೇಂದ್ರದಿಂದ ವಿವಿಧ ಉಪವಸತಿಗಳಿಗೆ ರಾಮಮಂತ್ರಾಕ್ಷತೆಯ ಕಲಶಗಳ ಹಸ್ತಾಂತರ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ: ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಧ್ವಜಾರೋಹಣ

Suddi Udaya

ಡಿ.30 : ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ : ವಾರ್ಷಿಕೋತ್ಸವ

Suddi Udaya
error: Content is protected !!