September 17, 2026
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಶಿಬಾಜೆ ಹರೀಶ್ ಮುಗೇರ ಆತ್ಮಹತ್ಯೆಗೆ ಯತ್ನಿಸಿಲ್ಲ: ಎಸ್.ಪಿ ಸ್ಪಷ್ಟನೆ

ಬೆಳ್ತಂಗಡಿ; ಶಿಬಾಜೆಯ ಶ್ರೀಧರ ಕೊಲೆ ಪ್ರಕರಣದ ದೂರುದಾರನಾಗಿದ್ದ ಹರೀಶ್ ಮೊಗೇರ ತಾನು ಆತ್ಮಹತ್ಯೆ ಮಾಡಿಕೊಳ್ಳು ಪ್ರಯತ್ನಿಸಿಲ್ಲ ಆಕಸ್ಮಿಕವಾಗಿ ಮದ್ಯದ ಬಾಟ್ಲಿಯೆಂದು ವಿಷ ಸೇವಿಸರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

ಮಾ.11ರಂದು ಬೆಳ್ತಂಗಡಿ ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಅನಾರೋಗ್ಯಕ್ಕೀಡಾಗಿ ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ವೈದ್ಯಕೀಯ ಸೂಚನಾಪತ್ರ ಬಂದ ಹಿನ್ನೆಲೆಯಲ್ಲಿ, ಸದ್ರಿ ವ್ಯಕ್ತಿಯನ್ನು ವಿಚಾರಿಸಿ, ಪೊಲೀಸರು ವಿಡಿಯೋ ಹೇಳಿಕೆ ದಾಖಲಿಸಿದ್ದು, ಅದರಂತೆ ಆತ ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು, ಸೇವಿಸುವುದಕ್ಕಾಗಿ ರಾತ್ರಿ ತೆಗೆಯುವಾಗ ಕಣ್ಡಪ್ಪಿನಿಂದ ಸದ್ರಿ ಮದ್ಯದ ಬಾಟಲಿಯ ಬಳಿಯಿದ್ದ ಕೀಟನಾಶಕವನ್ನು ತೆಗೆದು ಸೇವಿಸಿರುವುದಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾದಾಗ ತನ್ನ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದು, ಆದ್ದರಿಂದ ಈ ಬಗ್ಗೆ ಯಾವುದೇ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿರುತ್ತಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ, ಸದ್ರಿ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ, ಜಿಲ್ಲಾ ವೈದ್ಯಾಧಿಕಾರಿಯವರಿಗೆ ಕೊರಲಾಗಿರುತ್ತದೆ.ಆತನ ಮುಂದಿನ ಹೇಳಿಕೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.

Related posts

ತೆಂಕಕಾರಂದೂರು : ಗಿಂಡಾಡಿ ಎಂಬಲ್ಲಿ ಚಿರತೆ ಪ್ರತ್ಯಕ್ಷ

Suddi Udaya

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ದಾಖಲೆ ಸಾಧಿಸಿದ ಪಟ್ರಮೆಯ ಯುವ ಸಂಶೋಧಕ ದೀಪಕ್ ಎ.ಎಸ್.

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya

ಗುರುವಾಯನಕೆರೆ ಶ್ರೀ ಕ್ಷೇತ್ರ ಮಂಚಕಲ್ ದೈವ ಸನ್ನಿಧಿಯ 3ನೇ ವರುಷದ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಪರ್ವ ಸೇವೆ

Suddi Udaya

ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಮುಂಡ್ರುಪ್ಪಾಡಿಯಲ್ಲಿ ನಿರ್ಮಾಣಗೊಳ್ಳಲಿರುವ ವಾತ್ಸಲ್ಯ ಮನೆಗೆ ಗುದ್ದಲಿ ಪೂಜೆ

Suddi Udaya
error: Content is protected !!