September 16, 2026
ಗ್ರಾಮಾಂತರ ಸುದ್ದಿ

ಬೆಳಾಲು ಶ್ರೀ ಧ.ಮಂ ಪ್ರೌಢಶಾಲೆಯಲ್ಲಿ ಇಂಜಿನಿಯರ್ಸ್ ದಿನಾಚರಣೆ

ಬೆಳಾಲು :
ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯಲ್ಲಿ ಸೆ.14 ರಂದು ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು.


ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಇಂಜಿನಿಯರ್ಸ್ ದಿನಾಚರಣೆಯ ಕುರಿತ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ ದೇಶದ ಅಭಿವೃದ್ಧಿಗೆ, ನಿರ್ಮಾಣ ರಂಗಕ್ಕೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆಯನ್ನು ಸ್ಮರಿಸಿದರು‌.
ವಿದ್ಯಾರ್ಥಿನಿ ಶರಾವತಿ ದಿನ ವಿಶೇಷದ ಕುರಿತು ಮಾತನಾಡಿದರು.
ಸರ್ ಎಂ. ವಿಶ್ವೇಶ್ವರಯ್ಯನವರ ವಿಡಿಯೋ ತುಣುಕು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೃಜನ್ಯ ಕಾರ್ಯಕ್ರಮ ನಿರೂಪಿಸಿದರು‌.

Related posts

ಮಡಂತ್ಯಾರು ಗ್ರಾಮ ಪಂಚಾಯತ್ ವಿವಿಧ ಕಾಮಗಾರಿಗಳ ಲೋಕಾರ್ಪಣೆ

Suddi Udaya

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Suddi Udaya

ಜಿಲ್ಲಾ ಮಟ್ಟದ ಐ.ಟಿ.ಐ. ವಿದ್ಯಾರ್ಥಿನಿಯರ ತ್ರೋಬಾಲ್ ಪಂದ್ಯಾಟ: ಉಜಿರೆ ಎಸ್.ಡಿ.ಎಂ ಮಹಿಳಾ ಐಟಿಐ ಪ್ರಥಮ

Suddi Udaya

ವೇಣೂರು ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಉದ್ಘಾಟನೆ

Suddi Udaya

ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ನಿವಾಸಿ ವಿಶ್ವನಾಥ ವಿಷ ಸೇವಿಸಿ ಅತ್ಮಹತ್ಯೆ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಕುಕ್ಕೆ ಕುಮಾರಧಾರ ಸ್ಥಾನಗಟ್ಟ ನದಿಯಲ್ಲಿ ಸ್ವಚ್ಛತಾ ಕಾರ್ಯ

Suddi Udaya
error: Content is protected !!