28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಪೆರಿಂಜೆ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ ಪ್ರಾರಂಭ

ಪೆರಿಂಜೆ: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ.14ರಂದು ಪ್ರಾರಂಭಗೊಂಡು ಮಾ.19ರವರೆಗೆ ಜರುಗಲಿರುವುದು.

ಮಾ.14ರಂದು ಮೀನ ಸಂಕ್ರಮಣ ದಿನ ಮಧ್ಯಾಹ್ನ ಪೆರಿಂಜ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಪಡ್ಡ್ಯೋಡಿಗುತ್ತಿನಲ್ಲಿ ಉಪಹಾರ, ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಪಡ್ಡ್ಯಾರಬೆಟ್ಟಕ್ಕೆ ಆಗಮನ ಧ್ವಜಾರೋಹಣ, ಬಲಿ, ಚೆಂಡು ಜರುಗಲಿದೆ.

ಮಾ.15ರಂದು ಭೂತಬಲಿ ಉತ್ಸವ, ಮಾ.16ರಂದು ಅಂಬೋಡಿ, ಬಲಿ, ಉತ್ಸವ ಹೂವಿನ ಪೂಜೆ, ರಥಾರೋಹಣ, ಮಾ.17ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, ಮಹಾ ಅನ್ನಸಂತರ್ಪಣೆ, ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಮಾ.18ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗುವುದು, ಮಾ.19ರಂದು ರಾತ್ರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ. ರಾತ್ರಿ 8ರಿಂದ ದಕ್ಷಿಣ ಭಾರತದ ಹೆಸರಾಂತ ಕಲಾವಿದ ಗಾನಪ್ರವೀಣ ಬಳ್ಳಪ್ಪದವು ಯೋಗೀಶ ಶರ್ಮ ಮತ್ತು ಬಳಗದವರಿಂದ ನಾದ ತರಂಗ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.

Related posts

ದಭೆ೯ತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನಕ್ಕೆ ಶ್ರೀ ಕಂಚಿ ಕಾಮಕೋಟಿ ಶ್ರೀಗಳು ಭೇಟಿ

Suddi Udaya

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ಓಡಿಲ್ನಾಳ ಸ.ಉ.ಪ್ರಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಟೇಬಲ್ ಟೆನ್ನಿಸ್ ಪಂದ್ಯಾಟ: ಪ್ರಸನ್ನ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಬಿಜೆಪಿ ಬೆಳ್ತಂಗಡಿ ಯುವ ಮೋರ್ಚಾದಿಂದ ದೋಸೆ ಹಬ್ಬ, 75 ಸಾವಿರಕ್ಕೂ ಹೆಚ್ಚು ದೋಸೆ ಸವಿದ ಸಾರ್ವಜನಿಕರು: ವಿಶಿಷ್ಟ ಪರಿಕಲ್ಪನೆಯೊಂದಿಗೆ ದೋಸೆ ಹಬ್ಬವನ್ನು ಮಾಡಿದ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ: ಸಂಸದ ನಳಿನ್ ಕುಮಾರ್ ಕಟೀಲ್

Suddi Udaya

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ: ರೂ. 25.82 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya
error: Content is protected !!