September 17, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಕಂಬಳ: ಫಲಿತಾಂಶ

ಬಂಗಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಂಗಾಡಿ ಕೊಲ್ಲಿ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳ ನಡೆಯಿತು.

ಕಂಬಳದ ಫಲಿತಾಂಶದ ವಿವರ
ಕನೆಹಲಗೆ ವಿಭಾಗದಲ್ಲಿ ಭಾಗವಹಿಸಿದ ಬೋಳಾರ ತ್ರಿಶಾಲ್ ಕೆ. ಪೂಜಾರಿ ಎ ಮತ್ತು ಬಿ ಕುಂಡೋಳಿ ಶ್ರೀ ದುರ್ಗಾ ನಿಲಯ ಸುಧೀರ್ ಪದ್ಮನಾಭ ಶೆಟ್ಟಿ, ಪೆರುವಾರು ಗುರುವಾಯನಕೆರೆ ವೈಭವ್ ಸೀತಾರಾಮ ಶೆಟ್ಟಿ ಈ ನಾಲ್ಕು ತಂಡದ ಕೋಣಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಹಗ್ಗ ಹಿರಿಯ ವಿಭಾಗದಲ್ಲಿ 11 ಜತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಓಡಿಸಿದವರು ಕಕ್ಯಪದವು ಪೆಂರ್ಗಾಲ್ ಕೃತಿಕ್ ಗೌಡ), ದ್ವಿತೀಯ ಸ್ಥಾನವನ್ನು ನಂದಳಿಕೆ ಶ್ರೀಕಾಂತ ಭಟ್ ಬಿ., ಓಡಿಸಿದವರು (ಬಂಬ್ರಾಣಬೈಲು ವಂದಿತ್ ಶೆಟ್ಟಿ )
ಹಗ್ಗ ಕಿರಿಯ ವಿಭಾಗದಲ್ಲಿ 16 ಜತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಬೆಳವಾಯಿ ಪರೋಡಿ ಪುತ್ತಿಗೆಗುತ್ತು ನರಸಿಂಹ ಕೆ‌.ಶೆಟ್ಟಿ ಬಿ., (ಓಡಿಸಿದವರು ಮಾಳ ಆದಿಶ್ ಪೂಜಾರಿ), ದ್ವಿತೀಯ ಸ್ಥಾನವನ್ನು ಹಾಗೂ ಇವರದೇ ಎ ತಂಡದ ಕೋಣಗಳು (ಓಡಿಸಿದವರು: ಕಾವೂರು ದೋಟ ಸುದರ್ಶನ್)
ಅಡ್ಡ ಹಲಗೆ ವಿಭಾಗದಲ್ಲಿ 7 ಜತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ ( ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ದ್ವಿತೀಯ ಸ್ಥಾನವನ್ನು ನಕ್ರೆ ಕೊರಪಲಕಟ್ಟೆ ಲವೀನಾ ಅಲ್ಮೇಡ ಎ, (ಓಡಿಸಿದವರು:ಭಟ್ಕಳ ಪಾಂಡು),
ನೇಗಿಲು ಹಿರಿಯ ವಿಭಾಗದಲ್ಲಿ 17 ಜತೆ ಕೋಣಗಳು ಭಾಗವಹಿಸಿದ್ದು , ಪ್ರಥಮ ಸ್ಥಾನ ವನ್ನು ಕಕ್ಯಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (ಓಡಿಸಿದವರು: ಕಕ್ಯಪದವು ಕೃತಿಕ್ ಗೌಡ), ದ್ವಿತೀಯ ಸ್ಥಾನವನ್ನು ಮಿಜಾರು ಕೊಂಡಿಬೆಟ್ಟು ಶರಣ್ ಪೂಜಾರಿ, (ಓಡಿಸಿದವರು: ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ)
ನೇಗಿಲು ಕಿರಿಯ ವಿಭಾಗದಲ್ಲಿ 34 ಜತೆ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಓಡಿಸಿದವರು: (ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ದ್ವಿತೀಯ ಸ್ಥಾನವನ್ನು ಮಡಂತ್ಯಾರು ಮಾಲಾಡಿ ಬರ್ನ ದಿನೇಶ್ ಶೆಟ್ಟಿ (ಓಡಿಸಿದವರು ಪಡುಸಾಂತೂರು ಪೃಥ್ವಿರಾಜ ಪೂಜಾರಿ) ಪಡೆದುಕೊಂಡರು.

Related posts

ಬೆಳ್ತಂಗಡಿ: ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್, ಪ್ರದೀಪ್, ಜಯಂತ್ ಟಿ.

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜರಿಗೆ ಸ್ವಾಮೀಜಿಯವರಿಂದ ಆಶೀರ್ವಾದ:

Suddi Udaya

ಅಳದಂಗಡಿ ಅರಮನೆಯ ಅರಸರಿಂದ ಮತದಾನ: ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು

Suddi Udaya

ಕುದ್ರಡ್ಕ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ – ಯುಕೆಜಿ ತರಗತಿಗಳ ಆರಂಭ

Suddi Udaya

ತೋಟತ್ತಾಡಿ: ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್ ಕಕ್ಕಿಂಜೆ

Suddi Udaya

ಮದ್ದಡ್ಕ ನಿವಾಸಿ ಬೆಲ್ಚೆರ್ ಕ್ರಾಸ್ತ ಹೃದಯಾಘಾತದಿಂದ ನಿಧನ

Suddi Udaya
error: Content is protected !!