34 C
ಪುತ್ತೂರು, ಬೆಳ್ತಂಗಡಿ
March 17, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯ: ನೂತನ ಪದಾಧಿಕಾರಿಗಳ ಆಯ್ಕೆ

ವೇಣೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಫೆ.28ರಂದು ವೇಣೂರು ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನಲ್ಲಿ ವಲಯದ ಅಧ್ಯಕ್ಷ ಉಮೇಶ್ ಟೈಲರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಕಾರ್ಡ್ ವಿತರಣೆ ಮತ್ತು ಡಿಜಿಟಲ್ ಐಡಿ ಕಾರ್ಡ್ ವಿತರಣೆ ನಡೆಯಿತು.

ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಸಂಘಟನೆ ಮತ್ತು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು ಅತೀ ಹೆಚ್ಚು ಸದಸ್ಯರ ರಿನಿವಲ್ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಲಾನ್ಸಿ ಡಿಸೋಜರವರು ಕಾರ್ಯಕ್ರಮದ ಮತ್ತು ಸಂಘಟನೆ ಬಗ್ಗೆ ವಿವರಿಸಿದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷೆ ವೇದಾವತಿ ಜನಾರ್ದನ್ ನಮ್ಮ ವಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ಉಪಸ್ಥಿತರಿದ್ದರು. ವಲಯದ ನಿರ್ಗಮನ ಅಧ್ಯಕ್ಷರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹೊಸ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಮೀಳಾ ಹೊಸಂಗಡಿ, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ, ಕಾರ್ಯದರ್ಶಿ ಸುಪ್ರೀತಾ, ಜತೆ ಕಾರ್ಯದರ್ಶಿಯಾಗಿ ನಮಿತಾ, ಜಯಪ್ರಭಾ, ಕೋಶಾಧಿಕಾರಿ ಜಯಶ್ರೀ ಮತ್ತು ನ್ಯಾನ್ಸಿ ಅವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರ ಸಮಿತಿಗೆ ಆಯ್ಕೆ ಆದವರು ರತ್ನಾಕರ್ ಹೆಗ್ಡೆ, ಉಮೇಶ್ ಟೈಲರ್, ಆನಂದ್ ಟೈಲರ್, ಸಹನಾ ಶಾಸ್ತ್ರಿ, ವಸಂತ್ ವಿ.ಕೆ. ಟೈಲರ್ ಅವರನ್ನು ಆಯ್ಕೆ ಮಾಡಲಾಯಿತು.

ಸಂಘಟನಾ ಕಾರ್ಯದರ್ಶಿಯಾಗಿ ಕರಿಮಣೇಲು ಅಂಜಲಿ, ಮೂಡುಕೋಡಿ ಅಶ್ವಿತ, ಕುಕ್ಕೇಡಿ ಆನಂದ ಟೈಲರ್, ವೇಣೂರು ಸಹನಾ ಶಾಸ್ತ್ರಿ ಬಡಕೋಡಿ, ಹೊಸಂಗಡಿ ಪ್ರಮೀಳಾ, ಬಜಿರೆ ಸವಿತಾ, ಪಡಂಗಡಿ ಪ್ರೇಮಾ, ಗರ್ಡಾಡಿ ಸುನೀತಾ, ಅಂಡಿಂಜೆ ಜಯಂತಿ, ಗುಂಡೂರಿ ಶಶಿಕಲಾ, ಕೊಕ್ರಾಡಿ ವಿಶಾಲ ಹೆಗ್ಡೆ, ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಪ್ರಮೀಳಾ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಕೊಕ್ರಾಡಿ ವಿಶಾಲ ಹೆಗ್ಡೆ ಅವರು ಪ್ರಾರ್ಥನೆಯನ್ನು ಮಾಡಿದರು. ಸಹನಾ ವರದಿ ವಾಚಿಸಿದರು. ಸುಪ್ರೀತಾ ಲೆಕ್ಕಪತ್ರ ಮಂಡಿಸಿದರು. ಆನಂದ ಟೈಲರ್ ರವರು ಬಂದ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು.

Related posts

ಜಿಲ್ಲಾಮಟ್ಟದ ರಸಪ್ರಶ್ನೆ: ವೇಣೂರು ಸ. ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ ) ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

Suddi Udaya

ಬೆಂಗಳೂರು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪೆನಿ ವತಿಯಿಂದ ನಾಳ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ

Suddi Udaya

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಕನ್ನಡ ವಿಭಾಗದಿಂದ ವ್ಯಾಕರಣ ಮಾಲಿಕೆ ಕಾರ್ಯಾಗಾರ

Suddi Udaya

ಕಳೆಂಜ: ಮಣಿಗೇರಿ, ಕುಲಾಡಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಅಂತಿಮ

Suddi Udaya
error: Content is protected !!