32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ವಿದ್ಯುತ್ ಉಪಕೇಂದ್ರ ಕಾಮಗಾರಿ ವಿಳಂಬ: ಅರಣ್ಯ ಇಲಾಖೆ ಅನುಮತಿ ದೊರೆತ ಕೂಡಲೇ ಕಾಮಗಾರಿ ಮುಂದುವರಿಯುವುದು-ಎಂಎಲ್‌ಸಿ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: 2025 ಮಾ. 17 ರ ಕಾರ್ಯಾದೇಶದಂತೆ ಉಜಿರೆ ಗ್ರಾಮದ ವಿದ್ಯುತ್ ಘಟಕವನ್ನು 2026 ಮಾ.16 ರೊಳಗೆ ಲೋಕಾರ್ಪಣೆ ಮಾಡಬೇಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ವಿಳಂಬವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಅವರು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾ.9 ರಂದು ಸದನದಲ್ಲಿ ಉಜಿರೆ ಗ್ರಾಮದಲ್ಲಿನ 33 ಕೆ.ವಿ. ವಿದ್ಯುತ್ ಘಟಕವನ್ನು ಯಾವ ಕಾಲಮಿತಿಯೊಳಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೇಳಿದ ಚುಕ್ಕೆ ಪ್ರಶ್ನೆಗೆ
ಸಚಿವರು ಉತ್ತರಿಸಿದರು.

ಉಜಿರೆ ಗ್ರಾಮದಲ್ಲಿ 33ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು 2025 ಮಾ. 17 ರಂದು ಗುತ್ತಿಗೆ ಆದೇಶ ನೀಡಲಾಗಿದೆ. ಉಪಕೇಂದ್ರದ ಸ್ಥಾಪನೆಗೆ ಮಂಜೂರಾಗಿರುವ ಸರ್ಕಾರಿ ಜಮೀನಿನಲ್ಲಿರುವ ಕೆಲವೊಂದು ಮರು-ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇರುವುದರಿಂದ, ಇಲಾಖೆಯ ಮಂಜೂರಾತಿಗಾಗಿ ದಿನಾಂಕ:21.11.2025 ರಂದು ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಅರಣ್ಯ ಇಲಾಖೆಯ ಮಂಜೂರಾತಿ ದೊರೆತ ನಂತರ ಉಪಕೇಂದ್ರದ ಕಾಮಗಾರಿ ಪ್ರಾರಂಭಿಸಬೇಕಾಗಿರುತ್ತದೆ.
33 ಕೆವಿ ಉಪಕೇಂದ್ರಕ್ಕೆ ಅಗತ್ಯವಿರುವ ವಿದ್ಯುತ್ ಮಾರ್ಗ:- 231 ಸಂಖ್ಯೆಯ ಸ್ಮನ್ ಪೋಲ್ ಮತ್ತು 211 ಸಂಖ್ಯೆಯ ಟವರ್ ಗಳನ್ನು , 21.433 8., 33 ವಿದ್ಯುತ್ ಮಾರ್ಗವನ್ನು ನಿರ್ಮಿಸಬೇಕಾಗಿದ್ದು ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, 136 ಸಂಖ್ಯೆಯ 11 ಮೀಟ‌ರ್ ಸ್ಮನ್ ಪೋಲ್‌ಗಳು ಹಾಗೂ 91 ಸಂಖ್ಯೆಯ ಟವರ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುತ್ತದೆ.
ಕಾಮಗಾರಿಗೆ ಬೆಳ್ತಂಗಡಿ ತಾಲೂಕು, ಉಜಿರೆ ಗ್ರಾಮದ ಜಮೀನು ಸರ್ವನಂ:393/3ರಲ್ಲಿ 0.96 ಎಕರೆ ಸರ್ಕಾರಿ ಮಂಜೂರಾಗಿರುತ್ತದೆ. ಜಿಲ್ಲಾಧಿಕಾರಿಯವರ ಸಂಬಂಧಪಟ್ಟ ಮೊತ್ತಗಳನ್ನು ಪಾವತಿಸಿ, ಮೆಸ್ಕಾಂ ಹೆಸರಿಗೆ RTC ಆದೇಶದಂತೆ ವರ್ಗಾವಣೆಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಮೆಸ್ಕಾಂನ ಬಂಡವಾಳ ಕಾಮಗಾರಿ ಯೋಜನೆಯಡಿ ಕಾಮಗಾರಿಗೆ ಪರಿಷ್ಕೃತ ಅಂದಾಜು ವೆಚ್ಚದಂತೆ ರೂ.2636.32 ಲಕ್ಷ ನಿಗದಿಪಡಿಸಲಾಗಿದ್ದು, ಜನವರಿ-2026 ರ ಅಂತ್ಯಕ್ಕೆ, ರೂ. 489.13 ಲಕ್ಷ ವಿನಿಯೋಗಿಸಲಾಗಿದೆ. ಕಾಮಗಾರಿಯಲ್ಲಿ ಉಪಕೇಂದ್ರ ಸ್ಥಾಪನೆಗೆ ಬೇಕಾಗಿರುವ ಜಾಗವನ್ನು ಈಗಾಗಲೇ ನಿಗದಿ ಪಡಿಸಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ಸದರಿ ಜಾಗದಲ್ಲಿನ ಮರಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಆಕ್ಷೇಪಣೆ ಇರುವುದರಿಂದ, ಉಪಕೇಂದ್ರ ನಿರ್ಮಾಣ ಕಾಮಗಾರಿ ಆರಂಭವಾಗಿರುವುದಿಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ.

Related posts

ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್ಟ್ ಟೈಲ್ಸ್ ನ ರಾಜುರಾಮ್ ರಾಜಸ್ಥಾನದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವು

Suddi Udaya

ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ- ಗಾಯಾಳು ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ನಾಳ ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧನ

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಗೆ ಮನವಿ ಸಲ್ಲಿಸಿ ಸಮಾಲೋಚನೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಅಭ್ಯಾಸ್ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸ್ಪಾರ್ಕ್ ಪರೀಕ್ಷಾಪೂರ್ವ ಸಿದ್ದತಾ ಕಾರ್ಯಗಾರ

Suddi Udaya
error: Content is protected !!