September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ನಿಧನಕ್ಕೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಹಿರಿಯ ಯಕ್ಷಗಾನ ಕಲಾವಿದರಾಗಿ ಮೆರೆದ ಕೆ. ಗೋವಿಂದ ಭಟ್ ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.

ಅವರು ನಮ್ಮ ಧರ್ಮಸ್ಥಳ ಮೇಳದಲ್ಲೆ 54 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಅವರು, ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕುರಿಯ ವಿಠಲಶಾಸ್ತ್ರಿ ಅವರಲ್ಲಿ ಯಕ್ಷಗಾನ ಹಾಗೂ ನಾಟ್ಯದಲ್ಲಿ ತರಬೇತಿ, ಮಾರ್ಗದರ್ಶನ ಪಡೆದು ಪ್ರಬುದ್ಧ ಕಲಾವಿದರಾಗಿ ಮೆರೆದರು. ಅವರ ಕೌರವ, ಬಾಹುಬಲಿ, ಇಂದ್ರಜಿತು, ಕರ್ಣ, ಅರ್ಜುನ, ದೇವೇಂದ್ರ ಮೊದಲಾದ ಪಾತ್ರಗಳು ಅವರಿಗೆ ವಿಶೇಷ ಮನ್ನಣೆ, ಗೌರವ ತಂದುಕೊಟ್ಟಿವೆ.

ಪುರಾಣ ಪ್ರಸಂಗಗಳು ಹಾಗೂ ಯಕ್ಷಗಾನ, ಧರ್ಮ, ಕಲೆ, ಸಾಹಿತ್ಯದ ಬಗ್ಯೆ ಆಳವಾದ ಅಧ್ಯಯನ ನಡೆಸಿದ ಅವರು ಅಪಾರ ಪಾಂಡಿತ್ಯ ಹಾಗೂ ಜ್ಞಾನವನ್ನು ಹೊಂದಿದ್ದರು. ಅವರ ಉತ್ತಮ ವಾಕ್‌ಚಾತುರ್ಯ, ಪ್ರೌಢ ಅಭಿನಯ, ಪ್ರಬುದ್ಧ, ವಿದ್ವತ್ಪೂರ್ಣ ಹಾಗೂ ಅರ್ಥಗರ್ಭಿತ ಮಾತುಗಳು ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ.

ಧರ್ಮಸ್ಥಳದಲ್ಲಿ ನಮ್ಮ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿ, ಗುರುಗಳಾಗಿ ಸೇವೆ ಸಲ್ಲಿಸಿದ ಅವರು ಪುರಾಣ ವಾಚನ-ಪ್ರವಚನ, ಭಜನಾ ತರಬೇತಿಯಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಅವರ ನಿಧನ ನಿಜವಾದ ಅರ್ಥದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಆಗಿದೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

Related posts

ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya

ಬೆಳಾಲು ಪ್ಯಾಕ್ಸ್: ಆರ್ಥಿಕ ಅವ್ಯವಹಾರ ಪ್ರಕರಣಎರಡನೇ ಆರೋಪಿ ಪ್ರಶಾಂತ್ ಬಂಧನ

Suddi Udaya

ಕೊಕ್ರಾಡಿ ದೈವಸ್ಥಾನ: ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್ ಲಕ್ಕಿ ಕೂಪನ್ ನಲ್ಲಿ ವಿಜೇತರರಾದ ಶಿರ್ಲಾಲುವಿನ ಆಶಾ ಹಾಗೂ ಪ್ರಭಾಕರ್ ರವರಿಗೆ ಕಾರು ಕೀ ಹಸ್ತಾಂತರ

Suddi Udaya

ಆರೋಗ್ಯ ಸೇವೆಯ ಬೆನ್ನೆಲುಬಾದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ನೀಡಿ: ಭಾರತೀಯ ಮಜ್ದೂರು ಸಂಘ ಆಗ್ರಹ

Suddi Udaya

ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ಆಯ್ಕೆ

Suddi Udaya
error: Content is protected !!