September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಅನುಗ್ರಹ ಟ್ರೈನಿಂಗ್ ಕಾಲೇಜು ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಂದ ಬೆಳ್ತಂಗಡಿಯ ನೂರಾ ಗೋಲ್ಡ್‌ಗೆ ಭೇಟಿ

ಬೆಳ್ತಂಗಡಿ: ಅನುಗ್ರಹ ಟ್ರೈನಿಂಗ್ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳು ಬೆಳ್ತಂಗಡಿಯ ಪ್ರತಿಷ್ಠಿತ ಮತ್ತು ಅತಿ ದೊಡ್ಡ ಚಿನ್ನಾಭರಣ ಮಳಿಗೆಯಾದ ನೂರಾ ಗೋಲ್ಡ್ ಗೆ ಶಿಕ್ಷಣಾತ್ಮಕ ಭೇಟಿ ನೀಡಿದರು.

ಈ ಭೇಟಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇತ್ತೀಚಿನ ಫ್ಯಾಷನ್ ಟ್ರೆಂಡ್‌ಗಳಿಗೆ ಅನುಗುಣವಾಗಿ ವಸ್ತ್ರಗಳಿಗೆ ಹೊಂದುವ ಆಭರಣಗಳ ಆಯ್ಕೆ, ವಿನ್ಯಾಸ ಹಾಗೂ ಮ್ಯಾಚಿಂಗ್ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ನೂರಾ ಗೋಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಮಹಮ್ಮದ್ ಮುಸ್ತಫಾ ಕಕ್ಕಿಂಜೆ ಅವರು ವಿದ್ಯಾರ್ಥಿಗಳು ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜಿನ ಸಿಬ್ಬಂದಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ವಿವಿಧ ರೀತಿಯ ಚಿನ್ನಾಭರಣಗಳ ಬಗ್ಗೆ ಹಾಗೂ ಇತ್ತೀಚಿನ ವಿನ್ಯಾಸಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಇದಲ್ಲದೆ, ನೂರಾ ಗೋಲ್ಡ್‌ನ ಎಲ್ಲಾ ಸಿಬ್ಬಂದಿಗಳು ಸಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ, ಸ್ನೇಹಪೂರ್ವಕವಾಗಿ ಮಾರ್ಗದರ್ಶನ ಮಾಡಿದರು.

ಈ ಶಿಕ್ಷಣಾತ್ಮಕ ಭೇಟಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದ್ದು, ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸ ಅರಿವು ಮೂಡಿಸಿದೆ ಎಂದು ಸಂಸ್ಥೆಯ ಫ್ಯಾಶನ್ ಡಿಸೈನಿಂಗ್ ವಿಭಾಗದ ಶಿಕ್ಷಕಿ ಶ್ರೇಯಾಂಕ ತಿಳಿಸಿದರು.

Related posts

ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ರೂ.4.75 ಲಕ್ಷ ಸಾಲ ಪಡೆದು ವಂಚನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya

ಕರ್ನೋಡಿ  ಸ.ಉ. ಪ್ರಾ. ಶಾಲೆಯಲ್ಲಿ  ನವೀಕೃತ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ: ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ಘಟಕದ ಕೋರ್ ಕಮಿಟಿಯ ಸಭೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ಪೆರ್ಲ: ಮುಂಡತ್ತೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ

Suddi Udaya
error: Content is protected !!