July 23, 2026
ಅಪರಾಧ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರತಿಭಟನೆಬೆಳ್ತಂಗಡಿವರದಿ

ಅಪ್ರಾಪ್ತ ಬಾಲಕನ ಅಪಹರಿಸಿ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜಾಮೀನು ಮಂಜೂರು

ಬೆಳ್ತಂಗಡಿ : ಉಜಿರೆಯ ಜಾತ್ರಾ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ 17 ವಯಸ್ಸಿನ ಮುಸ್ಲಿಂ ಧರ್ಮದ ಬಾಲಕನ ಮೇಲೆ ತಂಡವೊಂದು ಅಮಾನುಷವಾಗಿ ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳಾದ ಉಜಿರೆ ಗ್ರಾಮದ ಪೆರ್ಲ ನಿವಾಸಿ ರಮೇಶ್ ಪೂಜಾರಿ(43) ಮತ್ತು ನಡ ಗ್ರಾಮದ ಸುರ್ಯ ನಿವಾಸಿ ಗೌರವ್ ಶೆಟ್ಟಿ(25) ಯನ್ನು ಮಾ.26 ರಂದು ಉಜಿರೆಯ ಅತ್ತಾಜೆಯಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಂಜೆ ಹಾಜರುಪಡಿಸಲಾಗಿದ್ದು. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಲಾಗಿದೆ. ಆರೋಪಿಗಳ ಪರವಾಗಿ ವಕೀಲರಾದ ಸುಬ್ರಹ್ಮಣ್ಯ ಅಗರ್ತ ವಾದ ಮಂಡಿಸಿದರು.

*ಪ್ರಕರಣದ ವಿವರ:* ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾ.11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ಜಾತ್ರಾ ಕಾರ್ಯಕ್ರಮಕ್ಕೆ ಹೋಗಿದ್ದಾನೆ ರಾತ್ರಿ 8.30 ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯೆಂಟ್ ವೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಗೌರವ್ ಶೆಟ್ಟಿ ಹಾಗೂ ರಮೇಶ್ ಇತರರೊಂದಿಗೆ ಸೇರಿ ನೀನು ಮುಸ್ಲಿಮನಾ ಎಂದು ಪ್ರಶ್ನಿಸಿದ್ದಾರೆ ಹೌದು ಎಂದಾಗ ಆತನ ಮೇಲೆ ಇವರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನ್ನು ಅಲ್ಲಿಂದ ಬೈಕ್ ನಲ್ಲಿ ತಂಡ ಅಪಹರಿಸಿದ್ದು ಸುಮಾರು ಐದು ಕಿ.ಮೀ ದೂರದವರೆಗೆ ಕೊಂಡೊಯ್ದು ಅಲ್ಲಿ ನಿರ್ಜನ ಪ್ರದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.ನೀವು ಬ್ಯಾರಿಗಳು ಟೆರರಿಸ್ಟ್ ಗಳು ನಿಮ್ಮನ್ನು ಕೊಂದರೆ ಒಬ್ಬ ಟೆರರಿಸ್ಟ್ ಅನ್ನು ಕೊಂದ ಹಾಗೆ ಎಂದು ಬೆದರಿಸಿದ್ದಾರೆ. ಅಲ್ಲದೆ ಬೆದರಿಕೆಯೊಡ್ಡಿ ಆತನ ವಿಡಿಯೋವನ್ನು ಮಾಡಿಕೊಂಡಿದ್ದಾರೆ ನಿರಂತರ ಹಲ್ಲೆ ನಡೆಸಿದ ಬಳಿಕ ತಡ ರಾತ್ರಿವೇಳೆ ಬಾಲಕನನ್ನು ಉಜಿರೆಯ ಬೆಳಾಲು ಕ್ರಾಸ್ ನ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

*ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕ:* ಹಲ್ಲೆಗೆ ಒಳಗಾದ ಬಾಲಕ ಮನೆಗೆ ಬಂದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದ ನಡೆದ ಘಟನೆಯನ್ನು ಮನೆಯವರ ಬಳಿ ಹೇಳಿರಲಿಲ್ಲ ಪ್ರತಿದಿನ ಆರೋಪಿಗಳು ಬಾಲಕನಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಾಲಕ ಮೊಬೈಲ್ ಕರೆಯನ್ನು ಸ್ವೀಕರಿಸದೆ ಇದ್ದಾಗ ಆತನ ಮೊಬೈಲಿಗೆ ಗೌರವ್ ಶೆಟ್ಟಿ ಸಂದೇಶ ಕಳುಹಿಸಿ ನೀನು ಕರೆ ಸ್ವೀಕರಿಸದಿದ್ದರೆ ನಿನ್ನ ಮನೆಗೆ ಬರುತ್ತೇವೆ ಎಂದು ಬೆದರಿಕೆ ಹಾಕಿದ್ದ ಇದಾದ ಬಳಿಕ ಖಿನ್ನತೆಗೆ ಒಳಗಾದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾನೆ. ಈ ಡೆತ್ ನೋಟ್ ಮನೆಯವರ ಗಮನಕ್ಕೆ ಆಕಸ್ಮಿಕವಾಗಿ ಬಂದಿದ್ದು ಬಾಲಕನಲ್ಲಿ ವಿಚಾರಿಸಿದಾಗ ಎಲ್ಲ ಮಾಹಿತಿಗಳನ್ನು ಹೇಳಿದ್ದಾನೆ. ಈ ಹಿನ್ನಲೆಯಲ್ಲಿ ಬಾಲಕನ ತಂದೆ ಮಾ 18ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

*ಪ್ರಕರಣ ದಾಖಲು:* ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವಬೆದರಿಕೆ, ಅಪಹರಣ, ಆತ್ಮಹತ್ಯೆಗೆ ಪ್ರೇರಣೆಯ ಬಗ್ಗೆ ನೀಡಿರುವ ದೂರಿನಂತೆ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರ ವಿರುದ್ಧ ಪೊಲೀಸರು BNS 137(2),115(2),351(2),352,353(2) ಜೊತೆಗೆ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

Related posts

ಬೆಳ್ತಂಗಡಿ ಜಿಲ್ಲಾ ರೈತ ತರಬೇತಿ ಕೇಂದ್ರ ಹಾಗೂ ಒಕ್ಕೂಟದ ವತಿಯಿಂದ ರೈತ ತರಬೇತಿ ಕಾರ್ಯಕ್ರಮ

Suddi Udaya

ಎ.7-12: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya

ರೈಲಿನ ಬೋಗಿಯಲ್ಲಿ ಅನ್ನಪೂರ್ಣ ರಾನಡೆಯವರ ಕೊಲೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya
error: Content is protected !!