ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಕಾಲೇಜಿನ ಮಾಲಿನಿ ಅಂಚನ್ ಅವರಿಗೆ ಪಿ.ಎಚ್.ಡಿ ಪದವಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕಿ (ಅಸೋಸಿಯೇಟ್ ಪ್ರೊಫೆಸರ್) ಆಗಿರುವ ಮಾಲಿನಿ ಅಂಚನ್ ಇವರು ‘ ವಿಮೆನ್ ಇನ್ ಎಗ್ರಿ ಬಿಸ್ ನೆಸ್ : ಎ ಲೈವ್ ಲೀ ಹುಡ್ ಪ್ಯಾಟರ್ನ್ ಎನಾಲಿಸಿಸ್ ವಿದ್ ಡಿಫರೆನ್ಸ್ ಟು ದಕ್ಷಿಣ ಕನ್ನಡ ಅಂಡ್ ಉಡುಪಿ ಡಿಸ್ಟ್ರಿಕ್ಟ್ ಎಂಬ ಶೀರ್ಷಿಕೆ ಅಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾಕ್ಟರ್ ಪ್ರೀತಿ ಕೀರ್ತಿ ಡಿಸೋಜಾ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಫಿಲಾಸಫಿ ಪಿ.ಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.

ಇವರು ತಮ್ಮ ಬಿಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಂಫಿಲ್ ಪದವಿಯನ್ನು ವಿನಾಯಕ ಮಿಷನ್ ಯುನಿವರ್ಸಿಟಿ ಸೇಲಂ, ತಮಿಳುನಾಡು ಇಲ್ಲಿಂದ ಪಡೆದಿದ್ದಾರೆ. ಪಿಜಿ ಡಿ.ಬಿ.ಎಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯಾದ ನೆಟ್ ಮತ್ತು ಕೆಸೆಟ್ ಇವೆರಡರಲ್ಲೂ ತೇರ್ಗಡೆಯಾಗಿದ್ದಾರೆ. ಸ್ವಸಹಾಯ ಸಂಘಗಳ ಮೇಲೆ ಸೂಕ್ಷ್ಮ ವಿಮೆಯ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಸಾಯ ಗುಂಪುಗಳನ್ನು ಉಲ್ಲೇಖಿಸಿ ಒಂದು ಅಧ್ಯಾಯನ ಈ ವಿಷಯದಲ್ಲಿ ಯುಜಿಸಿ ಪ್ರಾಯೋಜಿತ ಮೈನರ್ ರಿಸರ್ಚ್ ಅನ್ನು ಪೂರ್ಣಗೊಳಿಸಿದ್ದಾರೆ.

ಇವರ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ್ದಾರೆ. ಇವರ ಎರಡು ಲೇಖನಗಳು ಯುಜಿಸಿ ಕೇರ್ ಲಿಸ್ಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುತ್ತದೆ. ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ ಕೃಷಿ ವ್ಯವಹಾರದಲ್ಲಿ ಮಹಿಳೆಯರ ಸಾಮಾಜಿಕ , ಆರ್ಥಿಕ ಅಂಶಗಳ ಕುರಿತು ಅಧ್ಯಯನವನ್ನು ಕಾಲೇಜ್ ಕೊಡ ಮಾಡಲ್ಪಡುವ ಸೀಡ್ ಮನಿ ಪ್ರಾಜೆಕ್ಟ್ ಅಡಿಯಲ್ಲಿ ಪೂರ್ಣಗೊಳಿಸಿದ್ದಾರೆ

ತಮ್ಮ ಶೈಕ್ಷಣಿಕ ಸಾಧನೆಯೊಂದಿಗೆ ಸಂಗೀತ, ಸಾಹಿತ್ಯ ಕ್ರೀಡೆ, ನಟನೆ, ರೂಪಣೆಯಲ್ಲಿ ಆಸಕ್ತಿಹೊಂದಿರುವ ಇವರು  ಓರ್ವ ಯಕ್ಷಗಾನ ಕಲಾವಿದೆಯಾಗಿದ್ದಾರೆ. ಯಕ್ಷಗಾನ ಕ್ಷೇತ್ರದ ಸಾಧನೆಗೆ ಶ್ರೀ ಸತೀಶ್ ಪಟ್ಲಾ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ‘ಯಕ್ಷದ್ರುವ ಕಲಾಗೌರವ ಪ್ರಶಸ್ತಿ’ ಲಭಿಸಿದೆ.

ಮಂಗಳೂರಿನ ಉರ್ವ ಸ್ಟೋರ್ ಸುಂಕದಕಟ್ಟೆಯ ಎಮ್ ಶಿವಪ್ಪ ಕೋಟ್ಯಾನ್ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಸುಪುತ್ರಿಯಾಗಿರುವ ಇವರು ಪ್ರಸ್ತುತ ಕಾಲೇಜಿನಲ್ಲಿ ಸಹಪ್ರಾಧ್ಯಾಪಕಿಯಾಗಿರುವುದರ ಜೊತೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಣಿಯೂರು ಗುತ್ತು ಮನೆಗೆ ಭೇಟಿ

Suddi Udaya

ಅಕ್ರಮವಾಗಿ ಮದ್ಯ ಮಾರಾಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya

ಪಿಯುಸಿ ಫಲಿತಾಂಶ; ನಯನಾಡು ಸುಶ್ಮಿತಾ ಆಶಾಲತಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್

Suddi Udaya

ಬೆಳ್ತಂಗಡಿಯಲ್ಲಿ ಹೊಸ ಪ್ರಯತ್ನವೊಂದಕ್ಕೆ ಹೆಜ್ಜೆ, ಬೆಳ್ತಂಗಡಿ ನೈಟ್ಸ್ – 2025 , ಫುಡ್ ಫೆಸ್ಟಿವಲ್ ಮತ್ತು ಮ್ಯೂಸಿಕಲ್ ನೈಟ್

Suddi Udaya

ನಾವೂರು ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಡಾ| ಪ್ರದೀಪ್, ಉಪಾಧ್ಯಕ್ಷರಾಗಿ ಭಾರತಿ ಆಯ್ಕೆ

Suddi Udaya
error: Content is protected !!