September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಅಂಡಿಂಜೆ ಗ್ರಾ.ಪಂ. ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಮತ್ತು ಮಹಿಳಾ ಗ್ರಾಮಸಭೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಅಂಡಿಂಜೆ ಮತ್ತು ನಿಸರ್ಗ ಸಂಜೀವಿನಿ ಮಾದರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಂಡಿಂಜೆ ಇದರ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮತ್ತು ಮಹಿಳಾ ಗ್ರಾಮಸಭೆಯು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮಂಜುನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷೆ ಸುದರ್ಶಿನಿ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ವಲಯ ಮೇಲ್ವಿಚಾರಕ ಜಯಾನಂದ ಮಾತನಾಡಿ ಒಕ್ಕೂಟವು ಒಳ್ಳೆಯ ಕೆಲಸ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಆಚಾರ್ಯ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಉಷಾ ವಿ ನಾಯಕ್ ಮಹಿಳೆಯರ ಬಗ್ಗೆ ಮತ್ತು ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ವೇಣೂರು ವ್ಯವಸ್ಥಾಪಕಿ ಸ್ಪೂರ್ತಿಶ್ರೀ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಿದರು.

PMFME ಯೋಜನೆಯ ಫಲಾನುಭವಿ ಯಾದ 2026 ಜಿಲ್ಲಾ ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ ಪಡೆದ ಮಲ್ಲಿಕಾ ಎಸ್. ಮತ್ತು ಕೃಷಿ ಸಖಿ ವತ್ಸಲ ಇವರನ್ನು ಸನ್ಮಾನಿಸಲಾಯಿತು.

ಸದಸ್ಯರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು., ಸದಸ್ಯರು., ಅಂಗನವಾಡಿ ಕಾರ್ಯಕರ್ತೆಯರು., ಆಶಾ ಕಾರ್ಯಕರ್ತೆಯರು ಪಂಚಾಯತ್ ಸಿಬ್ಬಂದಿ ವರ್ಗದವರು., ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಒಕ್ಕೂಟದ ಸಿಬ್ಬಂದಿಗಳು ಶ್ರೀಮತಿ ಸುರೇಖಾ, ಜೋಶಿಲಾ, ವತ್ಸಲ ಸಹಕರಿಸಿದರು.

ಜಯಮಾಲ ಪ್ರಾರ್ಥಿಸಿ, ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಮಲ್ಲಿಕಾ ಎನ್ ಸ್ವಾಗತಿಸಿದರು. ಒಕ್ಕೂಟದ ನೂತನ ಪಶುಸಖಿ ಶ್ವೇತಾ ವಂದಿಸಿದರು. ಸೌಮ್ಯ ಪ್ರಶಾಂತ್‌ ನಿರೂಪಿಸಿದರು.

Related posts

ಧರ್ಮಸ್ಥಳ : ಅಜಿಕುರಿಯಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ ಆಸ್ಪತ್ರೆಗೆ ದಾಖಲು

Suddi Udaya

ಬಂದಾರು: ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಮತಪ್ರಚಾರ

Suddi Udaya

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ದಯಾ ವಿಶೇಷ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ದ.ಕ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ಪದಾಧಿಕಾರಿಗಳ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ಪ್ರಥಮ ಪ.ಪೂ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ನಿಡ್ಲೆ : ನೆಕ್ಕರೆ ನಿವಾಸಿ ಧರ್ಣಮ್ಮ ನಿಧನ

Suddi Udaya
error: Content is protected !!