ಅಭಿನಂದನೆತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಉದ್ಘಾಟನೆ; ನಂಬಿಕೆ, ಪರಂಪರೆಯ ಶ್ರೇಷ್ಠ ಸ್ವರ್ಣೋದ್ಯಮ ಸಂಸ್ಥೆ ಮುಳಿಯ: ಸಂಪತ್ ಬಿ. ಸುವರ್ಣ; 50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

ಬೆಳ್ತಂಗಡಿ: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶಾಖೆಯು ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವಕ್ಕೆ ಮಾ.30ರಂದು ಚಾಲನೆ ನೀಡಿತು.

ಮುಖ್ಯ ಅತಿಥಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ರವರು ಡೈಮಂಡ್ ಫೆಸ್ಟ್ ನ್ನು ಉದ್ಘಾಟಿಸಿ ಮಾತನಾಡಿ, 81 ವರ್ಷಗಳ ಮುಳಿಯ ನಡಿಗೆಯಲ್ಲಿ ಪರಂಪರೆ, ಸಂಸ್ಕೃತಿ ಇದೆ. ವಿದೇಶಿ ಕಂಪನಿಗಳ ಪೈಪೋಟಿಯ ಮಧ್ಯೆ ನಂಬಿಕೆ, ಪರಂಪರೆಯಿಂದ ಸಾಧನೆ ಮಾಡಿದ ಶ್ರೇಷ್ಠ ಸ್ವರ್ಣೋದ್ಯಮ ಸಂಸ್ಥೆ ಮುಳಿಯ. ಬೆಳ್ತಂಗಡಿಯಲ್ಲಿ ಹತ್ತು ವರ್ಷಗಳ ಹಿಂದೆಯೇ ಡೈಮಂಡ್ ಫೆಸ್ಟ್ ಮಾಡಲಾಗಿತ್ತು. ಅಂದೇ ಮುಳಿಯ ಗ್ರಾಹಕರ ನಂಬಿಕೆ ಗಳಿಸಿದೆ. ನಗುಮೊಗದ ಸೇವೆಯೊಂದಿಗೆ ಗ್ರಾಹಕರ ಭರವಸೆ ಗಳಿಸಿದೆ ಎಂದರು.

ಶ್ರೀ ದುರ್ಗಾ ವಿಮೆನ್ಸ್ ಕ್ಲಿನಿಕ್ ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವಿನಯ ಕಿಶೋರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಸ್ಥೆಯ ಕನ್ಸಲ್ಟೆಂಟ್ ವೇಣು ಶರ್ಮಾ ರವರು ಡೈಮಂಡ್ ಫೆಸ್ಟ್ ನ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಂಟೆಂಟ್ ಕ್ರಿಯೇಟರ್ ರೈಡಿಂಗ್ ಜೋಡಿಗಳು ಖ್ಯಾತಿಯ ಶ್ಯಾಮ್ ಕಾಮತ್ ಮತ್ತು ಶೈನಿ ಕಾಮತ್, ಸುದ್ದಿ ಉದಯ ಉಪ ಸಂಪಾದಕ ಸಂತೋಷ್ ಪಿ ಕೋಟ್ಯಾನ್, ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಲೋಹಿತ್ ಕುಮಾರ್ ಸ್ವಾಗತಿಸಿದರು. ಸಿಬ್ಬಂದಿ ಅಕ್ಷಯ್ ಪ್ರಾರ್ಥಿಸಿ, ಕೃಷ್ಣಪ್ಪ ವಂದಿಸಿದರು. ಕನ್ನಿಕಾ ಎಸ್ ನಿರೂಪಿಸಿದರು.

‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಫೆಸ್ಟ್‌ನ ಅಂಗವಾಗಿ ಗ್ರಾಹಕರು ರೂ.50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟಿçಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ. ಈ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ವೆರೈಟಿಯ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

ವಜ್ರದ ಆಭರಣಗಳ ಮೇಲೆ ಶೇ.೯೫ ಎಕ್ಸ್ಚೇಂಜ್ ಮತ್ತು ಶೇ.೯೦ ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಸಂಸ್ಥೆ ತಿಳಿಸಿದೆ.
ಮದುವೆ ಹಾಗೂ ಹಬ್ಬಗಳ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಹಲವಾರು ನವನವೀನ ಆಭರಣಗಳು ಈ ಉತ್ಸವದಲ್ಲಿ ಜನಾಕರ್ಷಣೆಯಾಗಿದೆ.
ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ಜೊತೆಯಾಗಿ ನಡೆಸುತ್ತಿರುವ ಈ ಉತ್ಸವ ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ. ಗ್ರಾಹಕರು ಸಮೀಪದ ಮುಳಿಯ ಶೋರೂಮ್‌ಗಳಿಗೆ ಭೇಟಿ ನೀಡಿ ಈ ವಿಶೇಷ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.

Related posts

ಕಳಿಯ ಗ್ರಾ.ಪಂ. ನಿಂದ ಪ.ಜಾತಿ ಮತ್ತು ಪ.ಪಂ ಕುಟುಂಬದವರಿಗೆ ಫ್ಯಾನ್ ವಿತರಣೆ

Suddi Udaya

ಬೆಳ್ತಂಗಡಿ: ಮೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಬಿಲ್ ವಸೂಲಾತಿ ಅಭಿಯಾನ

Suddi Udaya

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀ ರಾಮ ನವಮಿ ಆಚರಣೆ

Suddi Udaya

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು: ಅದೃಷ್ಟಾವಶತ್ ಪಾರಾದ ಚಾಲಕ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಂಪನ್ನ: ಉತ್ತಮ ಹೈನುಗಾರರು ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

Suddi Udaya
error: Content is protected !!