September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆಸಾಧಕರು

ಮಂಗಳೂರು ವಿವಿ ಸ್ನಾತಕ ಪದವಿ ಪರೀಕ್ಷೆ ಫಲಿತಾಂಶ: ಎಂ.ಎಸ್.ಡಬ್ಲ್ಯೂನಲ್ಲಿ ಅಜಿರದ ಯಶಸ್ವಿನಿಗೆ ಪ್ರಥಮ ರ‍್ಯಾಂಕ್

ಬೆಳ್ತಗಂಡಿ: ಮಂಗಳೂರು ವಿಶ್ವವಿದ್ಯಾಲಯವು ೨೦೨೫ನೇ ಸಾಲಿನಲ್ಲಿ ನಡೆಸಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಎಂ.ಎಸ್.ಡಬ್ಲ್ಯೂನಲ್ಲಿ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜಿರದ ಯಶಸ್ವಿನಿ ಪ್ರಥಮ ರ‍್ಯಾಂಕ್ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಡಬ್ಲ್ಯೂ (ಮೆಡಿಕಲ್ ಮತ್ತು ಸೈಕ್ಯಾಟ್ರಿಕ್ ಸ್ಪೆಷಲೈಸೇಶನ್) ಪರೀಕ್ಷೆಯಲ್ಲಿ ಯಶಸ್ವಿನಿ ಅವರು ಪ್ರಥಮ ರ‍್ಯಾಂಕ್ ಪಡೆದು ಇವರು ಮಾ.29ರಂದು ನಡೆದ 44 ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟರು ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಶೈಕ್ಷಣಿಕವಾಗಿ ಸದಾ ಮೆರುಗು ತೋರಿದ ಇವರು ತಮ್ಮ ಪರಿಶ್ರಮ, ಸಂಕಲ್ಪ ಮತ್ತು ಸಮರ್ಪಣೆಯಿಂದ ಈ ಸಾಧನೆಯನ್ನು ಮಾಡಿದ್ದಾರೆ.

ಇವರ ಸಾಧನೆ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ. ಪ್ರಸ್ತುತ ಇವರು ಬೆಂಗಳೂರಿನ ರಿಚ್ಮಂಡ್ ಫೆಲೋಶಿಪ್ ಸೊಸೈಟಿನಲ್ಲಿ ರಿಹ್ಯಾಬಿಲಿಟೇಶನ್ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಜಿರ ನಿವಾಸಿಯಾಗಿರುವ ಇವರು ಇಂದಿರಾ ಹಾಗೂ ದಿ.ಡೀಕಯ್ಯ ಗೌಡರ ಪುತ್ರಿ.

Related posts

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಕೊಕ್ಕಡ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಖೋ ಖೋ ಕ್ರೀಡಾ ಕೂಟದ ಸಮಾರೋಪ ಸಮಾರಂಭ

Suddi Udaya

ಉಜಿರೆ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya

ಗುರುವಾಯನಕೆರೆ: ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!