September 6, 2026
ಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಕೆಳಗೆ ಬಿದ್ದ ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು: ಗೇರುಕಟ್ಟೆ ರೇಷ್ಮೆ ರೋಡ್ ಬಳಿ ನಡೆದ ಘಟನೆ

ಬೆಳ್ತಂಗಡಿ: ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆ ಸಂಚರಿಸುತ್ತಿದ್ದ ಸರಕಾರಿ ಬಸ್ ನ ಬಾಗಿಲು ಇದ್ದಕ್ಕಿಂದಂತೆ ತೆರೆದು ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದ ಘಟನೆ ಇಂದು(ಮಾ.31) ಬೆಳಿಗ್ಗೆ ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ನಡೆದಿದೆ.

ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡುವರಾಗಿದ್ದಾರೆ. ಓರ್ವೆ ಬೆಳ್ತಂಗಡಿ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಮತ್ತೋರ್ವಳು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯಾಗಿದ್ದು , ಪಬ್ಲಿಕ್ ಪರೀಕ್ಷೆ ಬರೆಯುವುದಕ್ಕಾಗಿ ಈ ಬಸ್ ನಲ್ಲಿ ತೆರಳಿದ್ದಳು.

ಬಸ್ ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರು ಇದ್ದ ಕಾರಣ, ಓವರ್ ಲೋಡ್ ಆಗಿ ಈ ಘಟನೆ ನಡೆದಿರಬಹುದು ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಂಚರಿಸುತ್ತಿರುವಾಗಲೇ ಟಯರ್ ಕಳಚುವುದು, ಬ್ರೇಕ್ ಫೈಲ್, ಬಾಗಿಲು ತೆರೆಯುವುದು ಸರ್ವೇ ಸಾಮಾನ್ಯವಾಗಿದ್ದು, ಇಂತಹ ದುರ್ಘಟನೆಗಳು ನಡೆಯುತ್ತಲೇ ಇದೆ. ಈ ಬಗ್ಗೆ ಇಲಾಖೆಗಳು ಇನ್ನೂ ಕೂಡ ಹೆಚ್ಚಿತ್ತುಕೊಳ್ಳದಿರುವ ಬಗ್ಗೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related posts

ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ: ನಾನು ಯಾರಿಂದಲೂ ಹಣವನ್ನು ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ: ದೀಪ ಬೆಳಗಿಸಿ, ಮಾರಿಗುಡಿ ಎದುರು ತೆಂಗಿನ ಕಾಯಿ ಒಡೆದು ಪ್ರಮಾಣ

Suddi Udaya

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಬೆಳಾಲು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಅಳದಂಗಡಿ ಸ.ಪ್ರೌ. ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಹಿಂಬದಿ ಕೊಳಕು ನೀರು, ಗಬ್ಬು ವಾಸನೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ

Suddi Udaya

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಪಡಂಗಡಿ ಗ್ರಾ.ಪಂ. ಸದಸ್ಯ ಹಾಮದ್ ಬಾವ ಹೃದಯಾಘಾತದಿಂದ ನಿಧನ

Suddi Udaya
error: Content is protected !!