September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ: ಪ್ರಕರಣ ದಾಖಲು

ಬೆಳ್ತಂಗಡಿ: ಕೊಕ್ಕಡ ಬಾರ್ & ರೆಸ್ಟೋರೆಂಟ್ ನಲ್ಲಿ ಮದ್ಯ ಸೇವಿಸುವ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ನಾಲ್ಕು ಜನ ಆರೋಪಿಗಳು ಹಲ್ಲೆ ಮಾಡಿದ್ದು. ಈ ವೇಳೆ ರಕ್ಷಣೆ ಮಾಡಲು ಬಂದ ಮತ್ತೊಬ್ಬನ ಮೇಲೂ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೊಕ್ಕಡ ಸಾಲಿಯಾನ್ ಬಾರ್ & ರೆಸ್ಟೋರೆಂಟ್ ನಲ್ಲಿ ಮಾ.29 ರಂದು ರಾತ್ರಿ 9 ಗಂಟೆಗೆ ಕೊಕ್ಕಡ ಗ್ರಾಮದ ಹೊಸ ಮನೆ ನಿವಾಸಿ ಅಕ್ಷಯ್(31) ಎಂಬವರು ಮದ್ಯ ಸೇವಿಸಲು ಕುಳಿತಿರುವ ಸಮಯದಲ್ಲಿ ಯತೀಶ್ ಎಂಬಾತ ಬಂದು ಅವ್ಯಾಚ ಶಬ್ದಗಳಿಂದ ಬೈದು ದೀಕ್ಷಿತ್ ಗೆ ಹಣ ಕೊಡು ಎಂದು ಹೇಳುತ್ತಾ ಅಕ್ಷಯ್ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದುಕೊಂಡು ಬಾರ್ ಹಿಂಬದಿಗೆ ಹೋಗಿ ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ,ಪ್ರವೀಣ್ ರವರು ಸೇರಿಕೊಂಡು ಸಮಾನ ಉದ್ದೇಶದಿಂದ ಕೈಯಿಂದ ಮತ್ತು ಪ್ಲಾಸ್ಟಿಕ್ ಪೈಪಿನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಬೆದರಿಕೆ ಹಾಕಿ ದೂಡಿ ಹಾಕಿದ ಸಮಯದಲ್ಲಿ ಬೊಬ್ಬೆ ಹಾಕಿದ ಸಮಯದಲ್ಲಿ ಗಲಾಟೆ ಬಿಡಿಸಲು ಬಂದ ಸಂದೀಪ್ ಎಂಬವರಿಗೂ ಪ್ಲಾಸ್ಟಿಕ್ ಪೈಪು ಮತ್ತು ಕೈಯಿಂದ ಹಲ್ಲೆ ನಡೆಸಿ ಅವ್ಯಾಚ ಶಬ್ದಗಳಿಂದ ಬೈದು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಕ್ಷಯ್ ನೀಡಿದ ದೂರಿನ ಮೇರೆಗೆ ಕಲಂ 352,115(2),118(1),351(2) R/w 3(5) BNS -2023 ಅಡಿಯಲ್ಲಿ ಆರೋಪಿಗಳಾದ ಯತೀಶ್, ಧನುಷ್ ಭಂಡಾರಿ,ಶರತ್ ಭಂಡಾರಿ, ಪ್ರವೀಣ್ ವಿರುದ್ಧ ಮಾ.31 ರಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಪಡಂಗಡಿಯಲ್ಲಿ ರಬ್ಬರ್ ಕೊಟ್ಟಿಗೆಗೆ ಬಿದ್ದ ಬೆಂಕಿ: ಸಾವಿರಾರು ಮೌಲ್ಯದ ರಬ್ಬರ್ ಬೆಂಕಿಗಾಹುತಿ

Suddi Udaya

ಮಾ.4-6: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ- ಹರೀಶ್ ಪೂಂಜ ಪತ್ರಿಕಾಗೋಷ್ಠಿ

Suddi Udaya

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ರೂ.57.93 ಲಕ್ಷ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಸಭಾ ಸದಸ್ಯರ ನಿಧಿಯಿಂದ ಮಂಜೂರುಗೊಂಡ ರೂ. 1.50 ಕೋಟಿ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನ 121 ಶಾಲೆಗಳ ಸ್ಮಾರ್ಟ್ ಕ್ಲಾಸ್ ಟಿ.ವಿ ಹಸ್ತಾಂತರ

Suddi Udaya

ಉಜಿರೆ: ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಬೆಳ್ತಂಗಡಿ ಶಾಸಕರ ಕಚೇರಿ “ಶ್ರಮಿಕ” ಕಾರ್ಯಾಲಯ ಉದ್ಘಾಟನೆ: ಶಾಸಕ ಹರೀಶ್ ಪೂಂಜರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

Suddi Udaya
error: Content is protected !!