September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ಸಮುದಾಯ ಭವನದ ಆಯುರ್ವೇದಿಕ್ ಕೇಂದ್ರದ ಕಾಮಗಾರಿ

ಬೆಳ್ತಂಗಡಿ: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ನಡಿಯಲ್ಲಿ ಗುಜರಾತ್ ನ ಪ್ರಸಿದ್ಧ ಉದ್ಯಮಿಗಳೂ ಸಮಾಜ ಸೇವಕ ದಯಾನಂದ ಬೋಂಟ್ರ ರವರಿಂದ 2025ರ ನವೆಂಬರ್ 23ರಂದು ಶಂಕುಸ್ಥಾಪನೆಗೊಂಡು ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸ ಸಮುದಾಯ ಭವನದ ಆಯುರ್ವೇದಿಕ್ ಕೇಂದ್ರದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಒಂದು ವರ್ಷದ ಒಳಗೆ ಕಾಮಗಾರಿಯನ್ನು ಮುಗಿಸುವಂತಹ ಆಲೋಚನೆಯಲ್ಲಿರುವ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಆಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವಾಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ, ಟ್ರಸ್ಟ್ ನ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಆಡಳಿತ ಸಮಿತಿಯ ಸದಸ್ಯರುಗಳಾದ ನಾರಾಯಣ ಪೂಜಾರಿ ಮಚ್ಚಿನ, ನಿತ್ಯಾನಂದ ನಾವರ, ರಾಜೇಂದ್ರ ಚಿಲಿಂಬಿ, ಜಯರಾಮ ಬಂಗೇರ ಹೆರಾಜೆ, ನಾರಾಯಣ ಮಡ್ಯಂಗಳ ನಿತೀಶ್ ಶಾಂತಿವನ, ಮುಂತಾದವರು ಉಪಸ್ಥಿತರಿದ್ದರು.

Related posts

ಉರುವಾಲುಪದವು: ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ಬಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ “ಡೈಮಂಡ್ ಪ್ಲಸ್” ಪ್ರಶಸ್ತಿ

Suddi Udaya

ಉಜಿರೆ: ಶ್ರೀ. ಧ.ಮಂ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

Suddi Udaya

ಬರೆಂಗಾಯ : ಮುಳಂಪಾಯ ಎಂಬಲ್ಲಿ ಏರ್‌ಟೆಲ್ ನೆಟ್ ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ

Suddi Udaya
error: Content is protected !!