July 23, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ವೇಳೆ ವಿಷ ಜಂತು ಕಚ್ಚಿದ ಶಂಕೆ : ಚಿಕಿತ್ಸೆ ಪಡೆಯದೆ ವ್ಯಕ್ತಿ ಮೃತ್ಯು

ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ನಿವಾಸಿ ಕೃಷ್ಣಪ್ಪ ಮೂಲ್ಯ (63ವ) ರವರವರು ಹುತ್ತದಿಂದ ಕೈ ಹಾಕಿ ಜೇನು ತೆಗೆಯುವಾಗ ಯಾವುದೋ ವಿಷಜಂತು ಕಚ್ಚಿ, ಚಿಕಿತ್ಸೆ ಪಡೆಯದೆ ಎ.2 ರಂದು ಮೃತಪಟ್ಟ ಘಟನೆ ನಡೆದಿದೆ.

ಕೃಷ್ಣಪ್ಪ ಮೂಲ್ಯರವರ ಪತ್ನಿ ಮೃತಪಟ್ಟಿದ್ದು, ಅವರ ಮಕ್ಕಳು ಸುಮಾರು 15 ವರ್ಷಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರನ್ನು ಬಿಟ್ಟ ಹೋಗಿದ್ದು, ತದನಂತರ ಕೃಷ್ಣಪ್ಪ ಮೂಲ್ಯ, ಎಂಬವರು ಒಬ್ಬಂಟಿಯಾಗಿ ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಎಂಬಲ್ಲಿ ವಾಸವಾಗಿದ್ದರು. ಕೃಷ್ಣಪ್ಪ ಮೂಲ್ಯ ರವರ ತಂಗಿ ಶ್ರೀಮತಿ ಮುತ್ತಮ್ಮ ಎಂಬವರು ಕೃಷ್ಣಪ್ಪ ಮೂಲ್ಯರಿಗೆ ಪ್ರತಿದಿನ ಊಟ ತಿಂಡಿ ಕೊಟ್ಟು ಬರುತ್ತಿದ್ದು, ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರು ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ಸಮಯ ಎಡಕೈಗೆ ಏನೋ ಕಚ್ಚಿದ ‌‌ಗಾಯವಾಗಿ ಕೈ ಬಾತುಕೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳಲು ನಿರಾಕರಿಸಿದ್ದು,ಅವರು ಎ.2ರಂದು ಮನೆಯಲ್ಲೇ ಮೃತಪಟ್ಟಿದ್ದಾರೆ. ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವಾಗ ಯಾವುದೋ
ವಿಷಜಂತು ಹೆಚ್ಚಿರಬಹುದು ಎಂಬ ಶಂಕೆ ಉಂಟಾಗಿದೆ ಅಥವಾ ಇನ್ಯಾವುದೋ ಕಾರಣದಿಂದ‌ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಇಳಂತಿಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya

ಮಚ್ಚಿನ : ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya
error: Content is protected !!